Publish Date: Thu, 02 Jan 2020 (18:51 IST)
Updated Date: Thu, 02 Jan 2020 (18:54 IST)
ಅಪ್ಪಿ ತಪ್ಪಿ ರಸ್ತೆ ಬದಿಯಲ್ಲಿ ನೀವು ನಡೆದುಕೊಂಡು ಹೋಗುವಾಗ ಕೈ ಯಲ್ಲಿ ಮೊಬೈಲ್ ಹಿಡಿದು ಮಾತನಾಡುತ್ತಾ ಸಾಗಬೇಡಿ.
ಯಾಕಂದ್ರೆ ನಿಮ್ಮ ಕೈಯಲ್ಲಿದ್ದ ಮೊಬೈಲ್ ಕ್ಷಣಾರ್ಧದಲ್ಲೇ ಕಳ್ಳರ, ದರೋಡೆಕೋರರ ಪಾಲಾಗುವ ಸಾಧ್ಯತೆ ಹೆಚ್ಚಿದೆ.
ರಾಜಧಾನಿಯಲ್ಲಿ ಮೊಬೈಲ್ ಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇವೆ.
ನಡೆದುಕೊಂಡು ಫೋನ್ ನಲ್ಲಿ ಮಾತನಾಡುತ್ತಾ ಹೋಗೋವಾಗ ಬೆಂಗಳೂರಿನ ವಿವೇಕನಗರದಲ್ಲಿ ವೃದ್ಧ ದಂಪತಿಯ ಹತ್ತಿರವಿದ್ದ ಫೋನ್ ನ್ನು ಎಗರಿಸಿಕೊಂಡು ಕಳ್ಳರು ಪರಾರಿಯಾಗಿದ್ದಾರೆ.
ಸಿಟಿಟಿವಿಗಳಲ್ಲಿ ಕಳ್ಳರ ಕೈಚಳಕ ಸೆರೆಯಾಗಿದ್ದು, ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.