ಶಾಸಕರ ವಿರುದ್ಧ ನಿವೃತ್ತ ಶಿಕ್ಷಕರು ಫುಲ್ ಗರಂ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
 
									
										
								
																	
ಮಂಡ್ಯದ ನಾಗಮಂಗಲ ಗುರುಭವನವನ್ನ ಕೇವಲ ನಾಲ್ಕೈದು ಶಿಕ್ಷಕರ ನಿರ್ವಹಣೆಯಲ್ಲಿ ಖಾಸಗಿ ಆಸ್ತಿಯಂತೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗಂತ ಶಾಸಕ ಸುರೇಶ್‍ಗೌಡರ ಹೇಳಿಕೆಯನ್ನ ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು ಬಲವಾಗಿ ಖಂಡಿಸಿ, ತಿರುಗೇಟು ನೀಡಿದ್ದಾರೆ.   
 
									
										
										
								
																	
ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರಾದ ಸುಂದರ್ ಕುಮಾರ್, ಸಿ.ಡಿ. ಗಂಗಾಧರ್ ಮಾತನಾಡಿ, ಜಂಟಿ ಸುದ್ದಿಗೋಷ್ಟಿ ನಡೆಸಿದರು. 
									
			
			 
 			
 
 			
					
			        							
								
																	ಶಾಸಕರು ನಾಗಮಂಗಲ ಗುರುಭವನದ ಬಗ್ಗೆ ಪೂರ್ಣ ಗ್ರಹಿಕೆಯಿಲ್ಲದೆ ಸತ್ಯ ವಿಚಾರದ ಅರಿವಿಲ್ಲದೆ ಮನಬಂದಂತೆ ಮಾತನಾಡಿರುವುದು ಸರಿಯಲ್ಲ.
									
										
								
																	ನಮ್ಮ ವಿರೋಧಿಗಳು ಗುರುಭವನ ನವೀಕರಣ ಕಾಮಗಾರಿಯನ್ನ ಸಹಿಸದೇ ಮತ್ತು ಮುಂಬರುವ ಚುನಾವಣಾ ದೃಷ್ಟಿಯಿಂದ ಈ ಗೊಂದಲ ಮೂಡಿಸಲು ಷಡ್ಯಂತ್ರ ನಡೆಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
									
											
									
			        							
								
																	1983 ರಲ್ಲಿ ಸರ್ಕಾರಕ್ಕೆ ಕಿಮ್ಮತ್ತು ಹಣ ಕಟ್ಟಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಜಮೀನು ಮಂಜೂರಾಗಿದೆ.
ಅಂದಿನಿಂದ ಇಲ್ಲಿಯವರೆಗೂ ಕಾನೂನಿನಂತೆ ವಾರ್ಷಿಕ ಆಡಿಟ್ ವರದಿ ಮಾಡುತ್ತಾ ಸಂಘದ ಆಡಳಿತ ಮಂಡಳಿಯೂ ಅಭಿವೃದ್ದಿ ಮತ್ತು ನಿರ್ವಹಣೆ ಮಾಡಿಕೊಂಡು ಬಂದಿರುತ್ತದೆ.
									
			                     
							
							
			        							
								
																	ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಸ್ವಂತ ಹಣದಲ್ಲಿ ಗುರುಭವನ ನಿರ್ಮಿಸಿರುವುದು ರಾಜ್ಯದಲ್ಲಿ ನಾಗಮಂಗಲ ಮಾತ್ರವೇ ಎಂದಿದ್ದಾರೆ.