Publish Date: Thu, 02 Jan 2020 (14:22 IST)
Updated Date: Thu, 02 Jan 2020 (14:24 IST)
ನಾಡಿನ ಪ್ರಖ್ಯಾತ ಸುತ್ತೂರು ಮಠದ ಜಾತ್ರೆಗೆ ದಿನಗಣನೆ ಶುರುವಾಗಿದೆ.
ಸುತ್ತೂರು ಜಾತ್ರಾ ಪ್ರಚಾರ ರಥವನ್ನು ಮಂಡ್ಯದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಮಂಡ್ಯ ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಗುರುಗಳಾದ ಶ್ರೀ ಗಂಗಾಧರ ಶಿವಾಚಾರ್ಯ ಶ್ರೀಗಳು ರಥದಲ್ಲಿ ಅಲಂಕರಿಸಿರುವ ಸುತ್ತೂರು ಹಿರಿಯ ಶ್ರೀಗಳ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವಿಸಿದರು.
ಗ್ರಾಮೀಣ ಸೊಗಡಿನ ಸುತ್ತೂರು ಜಾತ್ರೆಯು ಜನೇವರಿ 20 ರಿಂದ 26 ರವರೆಗೆ ನಡೆಯಲಿದೆ. 23 ರಂದು ನಡೆಯಲಿರುವ ರಥೋತ್ಸವ ಹಾಗೂ 25ರಂದು ನಡೆಯಲಿರುವ ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದರು.