Publish Date: Sat, 28 Dec 2019 (21:25 IST)
Updated Date: Sat, 28 Dec 2019 (21:27 IST)
ಅನಾರೋಗ್ಯದಿಂದಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಉಡುಪಿ ಶ್ರೀಗಳು ಶ್ರೀಮಠಕ್ಕೆ ಮರಳಲಿದ್ದಾರೆ.
ಉಸಿರಾಟದಲ್ಲಿ ತೊಂದರೆಯುಂಟಾದ ಕಾರಣದಿಂದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆರೋಗ್ಯದಲ್ಲಿ ಸ್ಥಿರತೆ ಕಂಡುಬಂದರೂ, ಚೇತರಿಕೆ ಕಂಡುಬರುತ್ತಿಲ್ಲ. ಹೀಗಾಗಿ ಮಠಕ್ಕೆ ಶಿಫ್ಟ್ ಮಾಡಲಾಗುತ್ತಿದೆ.
ಭಕ್ತರು ಸಧ್ಯಕ್ಕೆ ಮಠಕ್ಕೆ ಬರೋದು ಬೇಡ ಶ್ರೀಮಠದ ಸ್ವಾಮೀಜಿಗಳು ಮನವಿ ಮಾಡಿದ್ದಾರೆ.