Publish Date: Tue, 24 Dec 2019 (18:59 IST)
Updated Date: Tue, 24 Dec 2019 (19:01 IST)
ತನಗೆ ಮೊಬೈಲ್ ಕೊಡಲಿಲ್ಲ ಅನ್ನೋ ಕಾರಣಕ್ಕೆ ಅಕ್ಕನ ಮೇಲೆ ಮುನಿಸಿಕೊಂಡ ತಮ್ಮ ಮಾಡಬಾರದ ಕೆಲಸ ಮಾಡಿದ್ದಾನೆ.
ಅಕ್ಕ ಅಖಿಲಾ ತನ್ನ ತಮ್ಮ ಯಶವಂತ್ ನಿಗೆ ಮೊಬೈಲ್ ಕೊಡಲಿಲ್ಲ. ಅಖಿಲಾಳ ನಡೆಯಿಂದ ಬೇಸತ್ತ ಯಶವಂತ್ ಅಕ್ಕನ ಜೊತೆಗೆ ಕಿರಿಕಿರಿಮಾಡಿಕೊಂಡಿದ್ದಾನೆ.
ಸಿಟ್ಟಿನ ಭರದಲ್ಲಿ ನೇರವಾಗಿ ತೋಟಕ್ಕೆ ಹೋಗಿ ಅಲ್ಲಿ ಕ್ರಿಮಿನಾಶಕ ಕುಡಿದಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಚಿಕ್ಕಬಳ್ಳಾಪುರದ ಮಂಡ್ಯಂಪಲ್ಲಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.