Select Your Language

Notifications

webdunia
webdunia
webdunia
webdunia

ಮೊಬೈಲ್ ಸಿಮ್ ಗಾಗಿ ತಾಯಿಗೆ ಚಾಕು ಇರಿದ ಪಾಪಿ ಮಕ್ಕಳು

ಮೊಬೈಲ್ ಸಿಮ್ ಗಾಗಿ ತಾಯಿಗೆ ಚಾಕು ಇರಿದ ಪಾಪಿ ಮಕ್ಕಳು
ಹುಬ್ಬಳ್ಳಿ , ಶುಕ್ರವಾರ, 13 ಡಿಸೆಂಬರ್ 2019 (15:56 IST)
ಮೊಬೈಲ್ ಸಿಮ್ ಕಾರ್ಡ್ ಸಲುವಾಗಿ ಪಾಪಿಗಳು ತಾಯಿಯೊಬ್ಬಳಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

ಮಗನ ಜೊತೆ ಕೆಲ ಯುವಕರು ಜಗಳ ಮಾಡುತ್ತಿದ್ದರು. ಅದನ್ನು ಕಂಡ ತಾಯಿ ಅವರ ಜಗಳವನ್ನು ಬಿಡಿಸಲು ಹೋದಾಗ ಆ ಪಾಪಿಗಳು ಆ ತಾಯಿಯನ್ನು ಚಾಕುದಿಂದ ಇರಿದು ಹೋದ ಘಟನೆ ಹುಬ್ಬಳ್ಳಿ ನಗರದಲ್ಲಿ ತಡ ರಾತ್ರಿ ನಡೆದಿದೆ.

ಶಾರುಖ್ ಕಲಾದಗಿ, ಮಹಮ್ಮದ ಗೌಸ್, ಶಾಬಾಜ್ ಹಾಗೀ ಸಾದಿಕ ಚಾಕು ಇರಿದ ದುಷ್ಕರ್ಮಿಗಳಾಗಿದ್ದಾರೆ. ರಾತ್ರಿ ವೇಳೆಯಲ್ಲಿ ಮಹಿಳೆಯ ಮನೆಗೆ ಬಂದು ಮೊಬೈಲ್ ಸಿಮ್ ಕಾರ್ಡ್ ಕೊಡುವಂತೆ ಆಕೆಯ ಮಗನ ಜತೆ ಜಗಳ ಆರಂಭಿಸಿದ್ದಾರೆ.

ಈ ವೇಳೆ ಜಗಳ ಬಿಡಿಸಲು ಬಂದ ತಾಯಿಗೆ ಚಾಕುವಿನಿಂದ ಇರಿದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಲಾಗಿದೆ. ಈ ಬಗ್ಗೆ ಕಸಬಾಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನೇ ಅಪಹರಿಸಿದ ಕಾಮುಕನ ತಂದೆ