Publish Date: Fri, 05 Jan 2024 (19:16 IST)
Updated Date: Fri, 05 Jan 2024 (18:19 IST)
ನಿಮ್ಮ ಸೈನ್ಯದ ಬಗ್ಗೆ ತಿಳಿಯಿರಿ ಎಂಬ ಹೊಸ ಅಭಿಯಾನಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಶುಕ್ರವಾರ ಚಾಲನೆ ನೀಡಿದರು. ಸೇನಾನೆಲೆಗೆ ಭೇಟಿ ನೀಡಿದ ಯೋಗಿ ಆದಿತ್ಯನಾಥ್ ಸೈನ್ಯದಲ್ಲಿ ಬಳಕೆಯಾಗುವ ಬಂದೂಕು, ಮದ್ದುಗುಂಡುಗಳೂ ಸೇರಿದಂತೆ ಎಲ್ಲ ಪರಿಕರಗಳನ್ನೂ ಕುತೂಹಲದಿಂದ ವೀಕ್ಷಿಸಿದರು.
ಸೈನಿಕರೊಡನೆಯೂ ಸಹ ತುಸುಕಾಲ ಯೋಗಿ ಆದಿತ್ಯನಾಥ್ ಸೌಹಾರ್ದಯುತವಾಗಿ ಕಾಲ ಕಳೆದರು. ಭಾರತೀಯ ಸೈನಿಕರ ಬಗ್ಗೆ ಹಾಗೂ ಭಾರತೀಯ ಸೈನ್ಯದ ಬಗ್ಗೆ ಜನಸಾಮಾನ್ಯರು ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮೂಡಿಸುವ ಸಲುವಾಗಿ ಅಭಿಯಾನವನ್ನು ನಡೆಸಲಾಗುತ್ತಿದ್ದು, ಸಾರ್ವಜನಿಕರು ಮುಕ್ತವಾಗಿ ಸೈನ್ಯದ ಚಟುವಟಿಕೆಗಳು, ಉದ್ದೇಶಗಳು ಹಾಗೂ ಕಾರ್ಯಾಚರಣೆಯ ಬಗ್ಗೆ ತಿಳುವಳಿಕೆ ಪಡೆಯಬಹುದಾಗಿದೆ.