Select Your Language

Notifications

webdunia
webdunia
webdunia
webdunia

ತಂದೆಯ ಡಬಲ್ ಬ್ಯಾರಲ್ ಗನ್ ನಿಂದ ಶೂಟ್ ಮಾಡಿಕೊಂಡ ವಿದ್ಯಾರ್ಥಿ

ತಂದೆಯ ಡಬಲ್ ಬ್ಯಾರಲ್ ಗನ್ ನಿಂದ ಶೂಟ್ ಮಾಡಿಕೊಂಡ  ವಿದ್ಯಾರ್ಥಿ

geetha

bangalore , ಗುರುವಾರ, 4 ಜನವರಿ 2024 (15:21 IST)
ಡಬಲ್ ಬ್ಯಾರೆಲ್ ಗನ್ ನಿಂದ ಎದೆಗೆ ಶೂಟ್ ಮಾಡ್ಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ಚಿಕ್ಕಬಾಣವರ ಬಳಿ ನಡೆದಿದೆ.ಕೊಡಗು ಮೂಲದ ವಿಶು ಉತ್ತಪ್ಪ  ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.ವಿಶು ತಂದೆ ನೈಸ್ ಕಂಪನಿಯಲ್ಲಿ ಸೆಕ್ಯೂರಿಟಿ ಆಗಿ ಕೆಲಸ ಮಾಡ್ತಿದ್ರು.ತಂದೆಯ ಡಬಲ್ ಬ್ಯಾರಲ್ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
 
ವಿಶು ಉತ್ತಪ್ಪ ಆರ್ ಆರ್ ಕಾಲೇಜಿನಲ್ಲಿ ಬಿಇ ಫಸ್ಟ್ ಇಯರ್ ವ್ಯಾಸಂಗ ಮಾಡ್ತಿದ್ದ.ಚಿಕ್ಕಬಿದರಕಲ್ಲು ಬಳಿಯ ತಿರುಮಲಪುರದಲ್ಲಿ ನಿನ್ನ ಸಂಜೆ 6.30 ರ ಸುಮಾರಿಗೆ ಮನೆಯಲ್ಲೇ ಗುಂಡು ಹಾರಿಸಿಕೊಂಡಿದ್ದಾನೆ.ಪೋಷಕರು ಮನೆಗೆ ವಾಪಸ್ ಬಂದಾಗ‌ ಪ್ರಕರಣ ಬೆಳಕಿಗೆ ಬಂದಿದೆ.ರಾತ್ರಿ 9 ಗಂಟೆಗೆ ಆಸ್ಪತ್ರೆಗೆ ತಂದೆ ಕರೆದುಕೊಂಡು ಹೋಗಿದ್ದಾರೆ.ಚಿಕಿತ್ಸೆ ಫಲಕಾರಿಯಾಗದೇ ವಿಶು ಉತ್ತಪ್ಪ ಸಾವನ್ನಪ್ಪಿದ್ದಾನೆ.ಮಾದನಾಯಕನಹಳ್ಳಿ ಪೊಲೀಸ್ರಿಂದ ತನಿಖೆ ಮುಂದುವರಿದಿದ್ದು,ಆತ್ಮಹತ್ಯೆ ನಿಖರ ಕಾರಣ ತಿಳಿದು ಬಂದಿಲ್ಲ.ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಬೆಸ್ಕಾಂ ಸಿಬ್ಬಂದಿಗಳ ಮತ್ತೊಂದು ಯಡವಟ್ಟು