Select Your Language

Notifications

webdunia
webdunia
webdunia
webdunia

ತಂದೆ ಬಗ್ಗೆ ಶೃುತಿ ಹಾಸನ್ ಹೇಳಿದ್ದೇನು ಗೊತ್ತಾ?

ತಂದೆ ಬಗ್ಗೆ ಶೃುತಿ ಹಾಸನ್ ಹೇಳಿದ್ದೇನು ಗೊತ್ತಾ?
mumbai , ಬುಧವಾರ, 27 ಡಿಸೆಂಬರ್ 2023 (14:34 IST)
ನಟನಾಗಿ ಅತ್ಯುನ್ನತ ಶಿಖರಗಳಿಗೆ ಏರಿರುವ ಕಮಲ್ ಹಾಸನ್ ನಾಸ್ತಿಕ. ದೇವರನ್ನ ನಂಬಲ್ಲ. ಆದರೆ ನಾನು ಆ ರೀತಿ ಅಲ್ಲ. ದೇವರನ್ನು ನಂಬುತ್ತೇನೆ. ಸಮಯ ಸಿಕ್ಕಾಗ ದೇವಸ್ಥಾನಗಳಿಗೆ ಹೋಗಿ ವಿಶೇಷ ಪೂಜೆಗಳನ್ನೂ ಮಾಡಿಸುತ್ತೇನೆ. ಆದರೆ ನನ್ನ ನಂಬಿಕೆ ಮಾತ್ರ ಮೂಢನಂಬಿಕೆ ತರ ಇರಲ್ಲ. ಚಿಕ್ಕಚಿಕ್ಕ ಬೇಡಿಕೆಗಳನ್ನು ದೇವರ ಮುಂದಿಡುತ್ತೇನೆ ಹೊರತು ಎಲ್ಲವನ್ನೂ ದೇವರೆ ಮೇಲೆ ಭಾರ ಹಾಕಲ್ಲ ಎಂದಿದ್ದಾರೆ. 
 
ತಂದೆ ತಾಯಿ ಎಲ್ಲರೂ ಚಿತ್ರರಂಗದ ಹಿನ್ನೆಲೆ ಇದ್ದರೂ, ಸ್ಟಾರ್ ವಾರಸುದಾರಳಾಗಿ ಬೆಳ್ಳಿತೆರೆಗೆ ಅಡಿಯಿಟ್ಟ ಶ್ರುತಿ ಹಾಸನ್ ನೆಲೆಕಂಡುಕೊಳ್ಳಬೇಕಾದರೆ ಸಾಕಷ್ಟು ದಿನ ಹಿಡಿಸಿತು. ಕೆರಿಯಲ್ ಆರಂಭದಲ್ಲಿ ಐರನ್ ಲೆಗ್ ಎಂಬ ಮುದ್ರೆ ಅವರ ಮೇಲೆ ಬಿತ್ತು. ಆಮೇಲೆ ಸಕ್ಸಸ್ ಸಿಕ್ಕಿ ಲಕ್ಕಿ ಹೀರೋಯಿನ್ ಆಗಿ ಬದಲಾದರು.
 
ಟಾಲಿವುಡ್, ಕೋಲಿವುಡ್ ಮತ್ತು ಬಾಲಿವುಡ್‍ನಲ್ಲಿ ತನ್ನದೇ ಆದಂತ ಛಾಪು ಮೂಡಿಸಿದ್ದಾರೆ ಈ ಬೆಡಗಿ. ತಾನು ಕಮಲ್ ಹಾಸನ್ ಮಗಳು ಎನ್ನುವುದಕ್ಕಿಂತ ತನ್ನದೇ ಆದಂತ ಪ್ರತಿಭೆಯನ್ನು ನಂಬಿಕೊಂಡು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಕೇವಲ ಐಡೆಂಟಿಟಿ ಅಷ್ಟೇ ಅಲ್ಲ ಬಹಳಷ್ಟು ವಿಚಾರಗಳಲ್ಲಿ ನಾನು ನನ್ನ ತಂದೆಯಂತಲ್ಲ ಅಂತಿದ್ದಾರೆ ಶ್ರುತಿ ಹಾಸನ್. 

Share this Story:

Follow Webdunia kannada

ಮುಂದಿನ ಸುದ್ದಿ

ಪಡ್ಡೆಗಳ ಹೃದಯದಲ್ಲಿ ಐಟಂ ಡ್ಯಾನ್ಸ್ ಮಾಡುತ್ತಿರುವ ಪೂನಂ ಪಾಂಡೆ