ಯಾರು ಎಷ್ಟೇ ಬೈದುಕೊಂಡರು ಪೂನಂ ಮಾತ್ರ ಬದಲಾಗಿಲ್ಲ. ಇದೇ ರೀತಿ ಹಾಟ್ ಚಿತ್ರಗಳನ್ನು ತೇಲಿಬಿಡುತ್ತಾ ಪಡ್ಡೆಗಳ ಹೃದಯದಲ್ಲಿ ಐಟಂ ಡ್ಯಾನ್ಸ್ ಮಾಡುತ್ತಿದ್ದಾಳೆ. ಇನ್ನೂ ಏನೇನು ಮಾಡ್ತಾಳೋ ಏನೋ.
ನಾನು ಹಾಕಿಕೊಂಡ ಬಿಕಿನಿ ಹೇಗಿದೆ? ಈ ಬ್ರಾ ಚೆನ್ನಾಗಿದಿಯಾ? ಅಂತ ಕೇಳುತ್ತಿದ್ದಾರೆ ಪೂನಂ ಪಾಂಡೆ. ಒಟ್ನಲ್ಲಿ ನಾಚಿಕೆ ಅಂದ್ರೆ ಏನೂ ಅಂತ ಗೊತ್ತೇ ಇಲ್ವೇನು ಈ ಹಾಟ್ ಬ್ಯೂಟಿಗೆ. ಮಾತೆತ್ತಿದರೆ ಸಾಕು ತನ್ನ ದೇಹದ ಸಿರಿಯನ್ನು ಪ್ರದರ್ಶಿಸುವುದೇ ಕಾಯಕ ಮಾಡಿಕೊಂಡಂತಿದೆ ಪೂನಂ ಪಾಂಡೆ ವ್ಯವಹಾರ. ಅದರಲ್ಲೂ ಪಾಪ ಪಡ್ಡೆಹುಡುಗರ ಪಾಡೇನಾಗಬೇಡ.
ಇತ್ತೀಚೆಗೆ ಎಂಜಾಯ್ ಮಾಡಲು ಮಾಲ್ಡೀವ್ಸ್ಗೆ ಹೋಗಿದ್ದಳು ಈ ಸುಂದರಿ. ಮಾಲ್ಡೀವ್ಸ್ ಎಂದರೆ ಸಮುದ್ರ ತೀರ. ಕೇಳಬೇಕೆ. ಬಣ್ಣಬಣ್ಣದ ಬಿಕಿನಿಗಳಿಗೇನು ಬರವಿರಲ್ಲ. ಸಹಜವಾಗಿ ಪೂನಂ ಸಹ ಬಿಕಿನಿ ತೊಟ್ಟು ನೋಡಿ ಹೇಗಿದೆ ನನ್ನ ಬ್ರಾ, ಬಿಕಿನಿ ಎಂದು ಕೇಳಿದ್ದಾಳೆ.