Select Your Language

Notifications

webdunia
webdunia
webdunia
webdunia

ಯೋಗಿ ಆದಿತ್ಯನಾಥ್ ಕಾನೂನು ಪಾಠ ಹೇಳುವ ಅಗತ್ಯವಿಲ್ಲ– ಸಿಎಂ

ಯೋಗಿ ಆದಿತ್ಯನಾಥ್ ಕಾನೂನು ಪಾಠ ಹೇಳುವ ಅಗತ್ಯವಿಲ್ಲ– ಸಿಎಂ
ಬೆಳಗಾವಿ , ಶುಕ್ರವಾರ, 22 ಡಿಸೆಂಬರ್ 2017 (13:56 IST)
ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯತೆ ನಮಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
 
ಬೆಳಗಾವಿಯ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಹಾಳಾದಷ್ಟು ಎಲ್ಲಿಯೂ ಹಾಳಾಗಿಲ್ಲ. ವಾಸ್ತವ ಪರಿಸ್ಥಿತಿ ಹೀಗಿರುವಾಗ ಯೋಗಿ ಆದಿತ್ಯನಾಥ್ ಅವರು ನಮಗೆ ಪಾಠ ಹೇಳುವುದು ಏನಿದೆ ಎಂದು ಪ್ರಶ್ನಿಸಿದ್ದಾರೆ.
 
ನನ್ನ ಹೆಸರಿನಲ್ಲಿಯೇ ರಾಮನಿದ್ದು, ಟಿಪ್ಪು ಜಯಂತಿಯಷ್ಟೇ ಅಲ್ಲ, ಹನುಮ ಜಯಂತಿ, ರಾಮನವಮಿಯನ್ನು ಮಾಡುತ್ತೇವೆ. ಜೊತೆಗೆ ಬಸವ, ವಾಲ್ಮೀಕಿ, ಕನಕದಾಸರು, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಮಾಡುತ್ತೇವೆ. ಎಲ್ಲರೂ ಸೌಹಾರ್ದದಿಂದ ಇರುವ ಪ್ರಯತ್ನ ನಮ್ಮದಾಗಿದೆ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಸುಂದರವಾಗಿದ್ದಾಳೆಂದು ಶಿಕ್ಷಕ ಪತಿ ಮಾಡಿದ್ದೇನು ಗೊತ್ತಾ?