Publish Date: Thu, 21 Dec 2017 (08:59 IST)
Updated Date: Thu, 21 Dec 2017 (09:02 IST)
ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ವಿಜಯದ ಪತದಾಕೆ ಹಾರಿಸಿದ ನಂತರ ನಮ್ಮ ಮುಂದಿನ ಟಾರ್ಗೆಟ್ ಕರ್ನಾಟಕ ಎಂದಿರುವ ಅಮಿತ್ ಶಾ ಹೇಳಿಕೆಗೆ ಒಡೆತ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಂಡದವರ ಹೊಸ ಯೋಜನೆ ರೂಪಿಸಿಕೊಂಡಿದ್ದಾರೆ.
ಯಡಿಯೂರಪ್ಪ ಹಾಗೂ ಈಶ್ವರಪ್ಪ ವಿರುದ್ದ ಎಸಿಬಿ ಬಳಕೆ ಮಾಡಿಕೊಂಡು ಏಕಕಾಲದಲ್ಲಿ ಇಬ್ಬರನ್ನು ಕಟ್ಟಿ ಹಾಕಲು ಬ್ರಹ್ಮಾಸ್ತ್ರ ಸಿದ್ದಪಡಿಸಲಾಗಿದೆ ಎಂದು ಹೇಳಲಾಗಿದೆ.
ಯಡಿಯೂರಪ್ಪ ಅವರನ್ನು ರಾಜ್ಯದಲ್ಲಿ ಪರಿವರ್ತನಾ ಯಾತ್ರೆ ಮೂಲಕ ಸುತ್ತುವುದು ತಡೆಯಲು ಯಡಿಯೂರಪ್ಪ ಮತ್ತೊಮ್ಮೆ ಎಸಿಬಿಯಿಂದ ಎಫ್ಐಆರ್ ದಾಖಲಿಸಲು ಚಿಂತನೆ ನಡೆದಿದ್ದು, ಇನ್ನೊಮ್ಮೆ ದೂರು ಕೊಡಿಸಲು ಪ್ರಕ್ರಿಯೆ ಆರಂಭಿಸಲಾಗಿದೆ ಎನ್ನಲಾಗಿದೆ.
ಹೈಕೋರ್ಟ್ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ವಕೀಲರ ಮೂಲಕ ಸುಪ್ರೀಂಕೋರ್ಟ್ ಮೊರೆ ಹೋಗಲು ವಕೀಲರಿಗೆ ಸೂಚನೆ ನೀಡಲಾಗಿದೆ.
ಈಶ್ವರಪ್ಪ ಅವರನ್ನು ಕೂಡ ಕಟ್ಟಿ ಹಾಕಲು ಚಿಂತನೆ ನಡೆಸಿರುವ ಸಿದ್ದರಾಮಯ್ಯ ಈಶ್ವರಪ್ಪ ವಿರುದ್ಧ ಹೊರಾಡುತ್ತಿರುವ ಶಿವಮೊಗ್ಗದ ವಕೀಲರನ್ನು ಕಾಂಗ್ರೆಸ್ ಉಗ್ರಪ್ಪ ಮೂಲಕ ಸಂಪರ್ಕ ಮಾಡಿದ್ದಾರೆ. ಈಶ್ವರಪ್ಪ ಮೇಲಿರುವ ಆರೋಪಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.