Publish Date: Tue, 07 May 2019 (21:21 IST)
Updated Date: Tue, 07 May 2019 (21:23 IST)
ಎಲ್ಲರೂ ಲೋಕಸಭೆ ಚುನಾವಣೆಯ ಫಲಿತಾಂಶದ ಮೇಲೆ ಕಣ್ಣಿಟ್ಟಿದ್ದಾರೆ. ಫಲಿತಾಂಶದ ಬಳಿಕ ಬದಲಾವಣೆ ಆಗೋದು ನಿಶ್ಚಿತ ಅಂತ ಯಡಿಯೂರಪ್ಪ ಹೇಳಿದ್ರೆ, ಇತ್ತ ಬಿಎಸ್ ವೈಗೆ ಸಂಕಷ್ಟ ಎದುರಾಗುತ್ತಿದೆ.
ಬಿ.ಎಸ್. ಯಡಿಯೂರಪ್ಪರ ಆಪರೇಷನ್ ಆಡಿಯೋ ತನಿಖೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ತನಿಖೆ ತಂಡ ರಚನೆ ಮಾಡಬೇಕು ಎನ್ನುವಷ್ಟರಲ್ಲಿ ಚುನಾವಣೆ ಬಂದಿದೆ ಹೀಗಾಗಿ ವಿಳಂಬ ಆಗಿದೆ. ಈ ಬಗ್ಗೆ ಸಿಎಂ ಕುಮಾರಸ್ವಾಮಿ ನಿರ್ಧಾರ ತೆಗೆದುಕೊಳ್ತಾರೆ.
ಮೇ 23 ನಂತ್ರ ತನಿಖೆ ತಂಡ ರಚನೆ ಬಗ್ಗೆ ತೀರ್ಮಾನ ತೆಗೆದುಕೊಳ್ತೀವಿ. ಹೀಗಂತ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.
ಆ ಮೂಲಕ ಲೋಕ ಫಲಿತಾಂಶ ಬಳಿಕ ಯಡಿಯೂರಪ್ಪ ವಿರುದ್ಧ ಆಡಿಯೋ ಪ್ರಕರಣ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ.