Select Your Language

Notifications

webdunia
webdunia
webdunia
webdunia

ಮಂತ್ರಾಲಯ ರಾಯರ ಮಠದಲ್ಲಿ ನಡೆದದ್ದೇನು?

ಮಂತ್ರಾಲಯ ರಾಯರ ಮಠದಲ್ಲಿ ನಡೆದದ್ದೇನು?
ಮಂತ್ರಾಲಯ , ಮಂಗಳವಾರ, 7 ಮೇ 2019 (21:14 IST)
ಅಕ್ಷಯ ತೃತೀಯ ದಿನದಂದು ರಾಯರ ಬೃಂದಾವನಕ್ಕೆ ಗಂಧ ಲೇಪನ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ಕಳಪೆ ಗುಣಮಟ್ಟದ ಗಂಧ  ಲೇಪನವನ್ನು ಸ್ವಾಮೀಜಿ ಮಾಡಿದ್ದಾರೆ ಎಂಬ ಆರೋಪ ಭಕ್ತರಿಂದ ಕೇಳಿಬಂದಿದೆ.

ಮಠದಲ್ಲೆ ಗಂಧ ತೇಯ್ದು ಲೇಪನ ಮಾಡಬೇಕಿತ್ತು. ಆದರೆ ಮಾರುಕಟ್ಟೆಯಲ್ಲಿ ಪೌಡರ್ ತರಿಸಿ ಗಂಧ ಲೇಪನ ಮಾಡಿದ್ದಾರೆ. ಕಳಪೆ ಗುಣಮಟ್ಟದ ಗಂಧ ತರಿಸಿ ಲೇಪನ ಮಾಡಿರುವ ಪೀಠಾಧಿಪತಿಯ ಕ್ರಮಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಂಪ್ರದಾಯವನ್ನು ಪೀಠಾಧಿಪತಿ ಮುರಿದಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಕಳಪೆ ಗಂಧ ಬಳಿಸಿರುವ ಕಾರಣಕ್ಕೆ ಬೃಂದಾವನ ಕಪ್ಪಾಗಿದೆ ಎಂಬ ಮಾತುಗಳೂ ಅಲ್ಲಲ್ಲಿ ಕೇಳಿಬಂದಿದ್ದವು.



Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವವಿದ್ಯಾಲಯದಲ್ಲಿ ಮೂರ್ತಿಯೇ ಬದಲು?