Publish Date: Mon, 10 Dec 2018 (18:13 IST)
Updated Date: Mon, 10 Dec 2018 (18:15 IST)
ಬಿಜೆಪಿಯವರು ಎಲ್ಲೆಲ್ಲಿ ಕುಳಿತು ವರ್ಗಾವಣೆ ದಂಧೆ ಮಾಡಿದ್ರು ಅನ್ನೋದು ನಮಗೆ ಗೊತ್ತಿಲ್ವೇ? ಯಡಿಯೂರಪ್ಪ ಏನು ಪ್ರಾಮಾಣಿಕರಾ? ಸತ್ಯವಂತರಾ? ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ ಶಕ್ತಿ ಸಂಘಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಬಂದಿದ್ದ ವೇಳೆ ಕೊಪ್ಪಳದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಯಡಿಯೂರಪ್ಪಗೆ ಮಾಡೋಕೆ ಬೇರ ಕೆಲಸವಿಲ್ಲ. ಇಂತಹ ಆರೋಪಗಳನ್ನ ಮಾಡ್ತಾ ಕುಳಿತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಈ ಮೊದಲು ವಾಗ್ದಾಳಿ ನಡೆಸಿದ್ದ ಯಡಿಯೂರಪ್ಪ ಫೈವ್ ಸ್ಟಾರ್ ಹೋಟಲ್ನಲ್ಲಿ ಸಿಎಂ ಕುಮಾರಸ್ವಾಮಿ ಅವರು ವರ್ಗಾವಣೆ ದಂಧೆ ಮಾಡ್ತಾರೆ ಎಂದು ಆರೋಪ ಮಾಡಿದ್ದರು.
ಯಡಿಯೂರಪ್ಪ ಎಲ್ಲಿ ಮಲಗ್ತಾರೆ ಅಂತಾ ನಾವು ಹೇಳಬೇಕಾ? ಅದೆಲ್ಲ ಒಳ್ಳೇ ಬೆಳವಣಿಗೆ ಅಲ್ಲ. ಪಕ್ಷದ ಸಂಘಟನೆ ದೃಷ್ಟಿಯಿಂದ ಇಡೀ ದಿನ ಬೇರು ಮಟ್ಟದಲ್ಲಿ ಪಕ್ಷ ಕಟ್ಟುವ ಕೆಲಸ ನಡೆಯುತ್ತಿದೆ ಎಂದರು.
ಪಕ್ಷ ಬಿಟ್ಟು ಯಾರೂ ಹೋಗುವುದಿಲ್ಲ. ಪಕ್ಷ, ಸರ್ಕಾರದ ಬಗ್ಗೆ ಯಾರೂ ಎಲ್ಲೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಸರ್ಕಾರಕ್ಕೆ ತೊಂದರೆ ಇಲ್ಲ. ಕಾಂಗ್ರೆಸ್-ಜೆಡಿಎಸ್ ನಾಯಕರು ಒಗ್ಗಟ್ಟಾಗಿದ್ದೇವೆ ಎಂದು ಗುಂಡೂರಾವ್ ಹೇಳಿದ್ದಾರೆ.