Select Your Language

Notifications

webdunia
webdunia
webdunia
webdunia

ಋಣಮುಕ್ತ ಪ್ರಮಾಣಪತ್ರ ವಿತರಣೆಗೆ ಮುಂದಾದ ಸರಕಾರ

ಋಣಮುಕ್ತ ಪ್ರಮಾಣಪತ್ರ ವಿತರಣೆಗೆ ಮುಂದಾದ ಸರಕಾರ
ಕಲಬುರಗಿ , ಶುಕ್ರವಾರ, 7 ಡಿಸೆಂಬರ್ 2018 (19:00 IST)
ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಋಣಮುಕ್ತ ಪ್ರಮಾಣ ಪತ್ರಗಳನ್ನು ರೈತರಿಗೆ ವಿತರಿಸಲಾಗುತ್ತಿದೆ. ಸರಕಾರ ಈ ಹೊಸ ಕಾರ್ಯಕ್ರಮ ಜಾರಿಮಾಡುತ್ತಿದೆ.

ಕಲಬುರಗಿ  ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸಹಕಾರ ಸಚಿವ  ಬಂಡೆಪ್ಪ ಖಾಶೆಂಪೂರ ಅವರು ಡಿಸೆಂಬರ್ 8ರಂದು ಸೇಡಂ ತಾಲೂಕಿನ ರೈತರಿಗೆ ಋಣಮುಕ್ತ ಪ್ರಮಾಣಪತ್ರಗಳನ್ನು ವಿತರಿಸಲಿದ್ದಾರೆ. 

ಸೇಡಂ ತಾಲೂಕಿನ ಸಹಕಾರಿ ಬ್ಯಾಂಕ್‍ಗಳಲ್ಲಿ ಸಾಲ ಪಡೆದ  ರೈತರಿಗೆ ಋಣಮುಕ್ತ ಪ್ರಮಾಣಪತ್ರ ವಿತರಣೆಯಾಗಲಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಋಣಮುಕ್ತ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವನ್ನು ಹಂತ ಹಂತವಾಗಿ ಜರುಗಿಸಲಾಗುವುದು. ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕ್‍ಗಳಲ್ಲಿ 52586 ರೈತರು ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ 204270 ರೈತರು ಬೆಳೆ ಸಾಲ ಪಡೆದಿದ್ದು, ಎಲ್ಲ ರೈತರ ಬೆಳೆಸಾಲ ಮನ್ನಾ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಡಗು ಸಂತ್ರಸ್ಥರಿಗೆ ಸಿಎಂ ಮಾಡಿದ್ದೇನು ಗೊತ್ತಾ?