’ನನ್ನ ಕಡೆಯಿಂದ ಕಾಂಗ್ರೆಸ್ ನವರಿಗೆ ಯಾವುದೇ ತೊಂದರೆ ಆಗಿಲ್ಲ- ಸಚಿವ ಎಚ್.ಡಿ.ರೇವಣ್ಣ

ಗುರುವಾರ, 6 ಡಿಸೆಂಬರ್ 2018 (14:02 IST)
ಹಾಸನ : ನಾನು ಸಿಎಂ ಆಕಾಂಕ್ಷಿಯಲ್ಲ ಎಂದು ಹಾಸನದಲ್ಲಿ ಇಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಹೇಳಿದ್ದಾರೆ.


ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,’ನನ್ನ ಕಡೆಯಿಂದ ಕಾಂಗ್ರೆಸ್ ನವರಿಗೆ ಯಾವುದೇ ತೊಂದರೆ ಆಗಿಲ್ಲ. ನಾನು ಸಮ್ಮಿಶ್ರ ಸರ್ಕಾರದ ಆಶಯಕ್ಕೆ ಧಕ್ಕೆ ತಂದಿಲ್ಲ. ವರ್ಗಾವಣೆ ಸೇರಿ ಯಾವುದೇ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿಲ್ಲ. ಬೇಕಾದ್ರೆ ಸಮನ್ವಯ ಸಮಿತಿ ಸಭೆಯಲ್ಲಿ ವಿವರಿಸಿ ಹೇಳುವೆ’ ಎಂದು ಹೇಳಿದ್ದಾರೆ.


ಅಲ್ಲದೇ ‘ಬದುಕಿರುವವರೆಗೂ ನಾನು ಕುಮಾರಸ್ವಾಮಿ ಹೊಡೆದಾಡಲ್ಲ. ಸೋದರರು ಕಚ್ಚಾಡುತ್ತಾರೆ ಅಂದುಕೊಂಡಿದ್ರೆ ಅದು ಭ್ರಮೆ. ಸಮ್ಮಿಶ್ರ ಸರ್ಕಾರ 5 ವರ್ಷ ಸುಭದ್ರವಾಗಿರಲಿದೆ. ಶಾರದಾಂಬೆ ಆಶೀರ್ವಾದ ಇರೋವರೆಗೂ ಸರ್ಕಾರಕ್ಕೆ ಏನೂ ಆಗಲ್ಲ. ಮಾಟ ಮಂತ್ರ ಮಾಡಿದ್ರೂ ನಮಗೆ ತಟ್ಟುವುದಿಲ್ಲ. ವಾಮಾಚಾರ ಮಾಡಿಸಿದವರಿಗೆ ವಾಪಸ್ ತಟ್ಟುತ್ತದೆ’ ಎಂದು ಸಚಿವ ರೇವಣ್ಣ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದೇಶದ ಅತಿ ಉದ್ದದ ರೈಲ್ವೆ ಸೇತುವೆ ಉದ್ಘಾಟನೆಗೆ ಸಜ್ಜು