ದೇಶದ ಅತ್ಯಂತ ಉದ್ದನೆಯ ರೈಲ್ವೆ ಸೇತುವೆ ಉದ್ಘಾಟನೆ ಸಜ್ಜುಗೊಂಡಿದೆ.
ದೇಶದಲ್ಲಿಯೇ ಅತ್ಯಂತ ಉದ್ದವಾಗಿರುವ ರೈಲ್ವೆ ಸೇತುವೆ ಬೋಗಿಬೀಲ್ ರೈಲ್ವೆ ಸೇತುವೆಯನ್ನು ಡಿ.25ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಭಾಗವಾಗಿರುವ ಈ ರೈಲು ಮಾರ್ಗ ಬ್ರಹ್ಮಪುತ್ರ ನದಿ ದಂಡೆಯ ಉತ್ತರ ಮತ್ತು ದಕ್ಷಿಣ ಭಾಗಕ್ಕೆ ಸಂಪರ್ಕ ಕಲ್ಪಿಸಲಿದೆ.
ಈ ಸೇತುವೆ 4.94 ಕಿ.ಮೀ ಉದ್ದವಿದೆ. ಅಂದು ಕೇಂದ್ರ ಸರ್ಕಾರದ ಉತ್ತಮ ಆಡಳಿತ ನೀಡಿದ ದಿನವನ್ನಾಗಿಯೂ ಆಚರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1997ರಲ್ಲಿ ಪ್ರಧಾನಿಯಾಗಿದ್ದ ಎಚ್.ಡಿ.ದೇವೇಗೌಡರು ಈ ರೈಲು ಮಾರ್ಗಕ್ಕೆ ಶಿಲಾನ್ಯಾಸ ನೆರವೇಸಿದ್ದರು. 2002 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಈ ಸೇತುವೆಯ ಕಾಮಗಾರಿ ಆರಂಭಿಸಲಾಗಿತ್ತು. ಈ 16 ವರ್ಷಗಳ ಅವಧಿಯಲ್ಲಿ ಈ ಕಾಮಗಾರಿ ಪೂರೈಸಲು ಸಾಕಷ್ಟು ಗಡುವು ನೀಡಿದ್ದರೂ ಕಾಮಗಾರಿ ಪೂರ್ಣಗೊಂಡಿರಲಿಲ್ಲ.
ಈಗ ಈ ಸೇತುವೆ ಉದ್ಘಾಟನೆಗೆ ದಿನಾಂಕ ನಿಗದಿಯಾಗಿರುವುದರಿಂದ ಈ ಭಾಗದ ಬಹುದಿಗಳ ಕನಸು ನನಸಾದಂತಾಗಿದೆ.