Publish Date: Thu, 06 Dec 2018 (12:06 IST)
Updated Date: Thu, 06 Dec 2018 (12:08 IST)
ಬೆಂಗಳೂರು : ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಕಂಪ್ಲಿ ಶಾಸಕ ಗಣೇಶ್ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,’ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗಬೇಕು. ಕಾಂಗ್ರೆಸ್ ಪಕ್ಷದ 50 ಶಾಸಕರ ಕನಸು ಇದೇ ಆಗಿದೆ. ಇದಕ್ಕಾಗಿ ಯಾವುದೇ ತ್ಯಾಗಕ್ಕೂ ನಾವು ಸಿದ್ಧರಿದ್ದೇವೆ. 2019 ರ ಚುನಾವಣೆ ಬಳಿಕ ಸಿಎಂ ಬದಲಾವಣೆ ಸಾಧ್ಯತೆ ಇದೆ. ಸಿದ್ಧರಾಮಯ್ಯನವರು ನಮಗೆ ಹೈಕಮಾಂಡ್, ಅವರನ್ನು ಬಿಟ್ಟು ಪಕ್ಷ ಬದಲಿಸಲ್ಲ. ಎಂದು ಹೇಳಿದ್ದಾರೆ.
ತಾವು ಅಪರೇಶನ್ ಕಮಲಕ್ಕೆ ಒಳಗಾಗಿರುವ ವದಂತಿ ಬಗ್ಗೆ ಮಾತನಾಡಿದ, ‘ಅವರು ನಾನು ಅಪರೇಶನ್ ಕಮಲಕ್ಕೆ ಒಳಗಾಗಿದ್ದೇನೆ ಅನ್ನೋದು ಕೇವಲ ವದಂತಿ ಅಷ್ಟೇ ನಾನು ಅಪರೇಶನ್ ಕಮಲಕ್ಕೆ ಒಳಗಾಗಿಲ್ಲ ಎಂದು ವಿಧಾನಸೌಧದಲ್ಲಿ ಕಂಪ್ಲಿ ಶಾಸಕ ಗಣೇಶ್ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.