Publish Date: Fri, 03 Feb 2023 (19:01 IST)
Updated Date: Fri, 03 Feb 2023 (19:04 IST)
ತಮ್ಮ ಕೆಲವು ಸಮಾಜಗಳಿಗೆ ಯಾವುದೇ ವರದಿ ಯಿಲ್ಲದೆ ಮೀಸಲಾತಿ ಸೇರಿಸಿದರು ನಮ್ಮ ಸಮಾಜಕ್ಕೆ ಹಲವಾರು ವರದಿಗಳನ್ನು ಕೇಳುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೂರಿತು ನಡೆಯುತ್ತಿರುವ ಧರಣಿ ಸ್ಥಳಕ್ಕೆ ಶಾಸಕ ಯತ್ನಾಳ ಭಾಗವಹಿಸಿ ಮಾತನಾಡಿದ ಅವರು ಸತತವಾಗಿ ಎರಡು ವರ್ಷ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ಹೋರಾಟ ನಡೆಯುತ್ತಿದೆ.ಈಡಿ ರಾಜ್ಯದಲ್ಲಿ ಒಂದು ದೊಡ್ಡ ಸಮಾಜ ಈದೇ ಸಮಾಜದಿಂದ ಕೆಲವು ನಾಯಕರು ಅನೇಕ ಪದವಿ ಲಾಭವನ್ನ ಅಂಜಿಸೋ ಬೇದರಿಸಿ ಪಡೆದುಕೊಂಡಿದ್ದಾರೆ.ವಿಜಯಪುರದಲ್ಲಿ ನಡ್ಡಾ ಅವರ ಕಾರ್ಯಕ್ರಮ ದಲ್ಲಿ ಭಾಗವಹಿಸಿಲ್ಲ ಎಂಬುವುದನ್ನ ದೊಡ್ಡ ವಿಚಾರ ಮಾಡಿದ್ದಾರೆ.ಯತ್ನಾಳ್ ನೋಟಿಸ್ ಕೊಟ್ಟಿದ್ದಾರೆ ಅಂತಾ ಮಾಧ್ಯಮದಲ್ಲಿ ಹಾಕಿದ್ರು, ಎಲ್ಲಿ ನೋಟೀಸ್ ಕೊಟ್ಟಿದ್ದಾರೆ ಆ ಪ್ರತಿ ಕೊಟ್ಟರೆ ೧೦ ಲಕ್ಷ ರೂ ಕೊಡುತ್ತೇನೆ. ಒಂದು ದೊಡ್ಡ ಕೆಲಸ ಆಗಬೇಕಾಗಿದೆ ಅದಕ್ಕೆ ಸುಮ್ಮನೆ ಇದೀನಿ ಇನ್ನೂ ಪ್ರಧಾನಿ ಮಂತ್ರಿಗಳು ಸಂದೇಶ ಕೊಟ್ಟಿದ್ದಾರೆ ನಿಮ್ಮ ಸಮಾಜಕ್ಕೆ ಅನ್ಯಾಯ ಮಾಡುವುದಿಲ್ಲ. ಅದಕ್ಕೆ ಸೈಲೆಂಟಾಗಿದೀನಿ ಎಂದರು.