Select Your Language

Notifications

webdunia
webdunia
webdunia
webdunia

ಕೆಲಸ ಕೊಡಿಸ್ತೇವೆ ಅಂತಾ ಬೆಂಗಳೂರಿಗೆ ಕರೆಸಿಕೊಂಡು ರಸ್ತೆಗೆ ಬಿಸಾಡಿದ್ರು..!

ಕೆಲಸ ಕೊಡಿಸ್ತೇವೆ ಅಂತಾ ಬೆಂಗಳೂರಿಗೆ ಕರೆಸಿಕೊಂಡು ರಸ್ತೆಗೆ ಬಿಸಾಡಿದ್ರು..!
bangalore , ಶುಕ್ರವಾರ, 3 ಫೆಬ್ರವರಿ 2023 (18:53 IST)
ಅದೊಂದು ಖತರ್ನಾಕ್ ಗ್ಯಾಂಗ್.ಕೆಲಸದ ಅವಶ್ಯಕತೆ ಇರೋರೆ ಇವರ ಬಂಡವಾಳ.ಸಾಮಾಜಿಕ‌ ಜಾಲತಾಣದಲ್ಲಿ ಸಂಪರ್ಕಿಸಿ ಬೆಂಗಳೂರಿಗೆ ಕರೆಸಿಕೊಳ್ತಿದ್ರು.ಕೆಲಸ ಸಿಗುತ್ತೆ ಅಂತಾ ಬಂದವರಿಗೆ ಇಲ್ಲಿ ಆಗ್ತಾ ಇದ್ದಿದ್ದು ಮಾತ್ರ ನರಕ ದರ್ಶನ. ಆಸಾಮಿಗಳ ಹೆಸರು ಗೋಪಿಚಂದ್@ಮಲ್ಲು ಶಿವಶಂಕರ ರೆಡ್ಡಿ,ಗುಂಜ ಮಂಗರಾವ್,ಶೇಕ್ ಶಹಬಾಷಿ ಮತ್ತು ಮಹೇಶ್ ಇವತ್ತಿನ ಕಥೆಯ ವಿಲನ್ ಗಳು ಇವರೇ ನೋಡಿ.ಕೆಲಸ ಕೊಡಿಸ್ತೇವೆ ಅಂತಾ ಫೇಸ್ ಬುಕ್ ನಲ್ಲಿ ಜಾಹೀರಾತು ನೀಡ್ತಿದ್ದ ಆರೋಪಿಗಳು,ಅದನ್ನ ನಂಬಿ ಸಂಪರ್ಕ ಮಾಡಿದವರಿಗೆ ಅಪ್ಲಿಕೇಶನ್ ಫೀಸ್ ಅದು ಇದು ಅಂತಾ ಹಣ ಸುಲಿಗೆ ಮಾಡ್ತಿದ್ರು. ಇಂಟರ್ವ್ಯೂ ಇದೆ ಅಂತಾ ಕರೆಸಿಕೊಳ್ತಿದ್ರು ನಂಬಿ ಬಂದವರ ಬಳಿಯಿಂದ ಲಕ್ಷ ಲಕ್ಷ ಹಣ ಕಸಿದು ರಸ್ತೆಗೆ ಬಿಸಾಡಿ ಹೋಗ್ತಿದ್ರು.ಇದೇ ರೀತಿ ಜನವರಿ 11 ರ ಬೆಳಗ್ಗೆ 5.30 ಕ್ಕೆ ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೆಬ್ಬಾಳ ಫ್ಲೈಓವರ್ ಬಳಿ ಇರುವ 6th ಗೇರ್ ಅನ್ನುವ ಕಾರ್ ಶೋರೂಂ ಬಳಿ ಆಂದ್ರದಿಂದ ಪ್ರದೀಪ್ ಎಂಬಾತ ಬಂದಿದ್ದ ಆತನನ್ನ ಸ್ವಿಫ್ಟ್ ಕಾರಿನಲ್ಲಿ ಪಿಕ್ ಮಾಡಿಕೊಂಡ ನಾಲ್ವರು ಚಿಕ್ಕಜಾಲ ಅಂತೆಲ್ಲ ಸುತ್ತಾಡಿಸಿ ಹತ್ ಹತ್ತಿರ 6 ಲಕ್ಷ ಹಣ ಕಸಿದುಕೊಂಡು ಡೆಕತ್ಲಾನ್ ಬಳಿ ಬಿಟ್ಟು ಹೋಗಿದ್ರು‌.ದೂರು ದಾಖಲಾಗ್ತಿದ್ದಂತೆ ತನಿಖೆಗೆ ಇಳಿದ ಕೊಡಿಗೆಹಳ್ಳಿ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.
ಇನ್ನೂ ಈ ಪ್ರಮುಖ ಆರೋಪಿ‌ ಗೋಪಿಚಂದ್ ಅಲಿಯಾಸ್ ಮಲ್ಲು ಶಿವಶಂಕರ್ ಕೂಡ ಓರ್ವ ಟೆಕ್ಕಿಯಾಗಿದ್ದ.ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಕೆಲಸ ಮಾಡಿಕೊಂಡಿದ್ದ.ಡೂಪ್ಲಿಕೇಟ್ ದಾಖಲಾತಿ‌ ನೀಡಿ ಕೆಲಸಕ್ಕೆ ಸೇರಿಕೊಂಡಿದ್ದ ಆಸಾಮಿಯ ಅಸಲಿ ವಿಷಯ ಗೊತ್ತಾದ ಬಳಿಕ ಆತನನ್ನ ಕೆಲಸದಿಂದ ತೆಗೆದುಹಾಕಲಾಗಿತ್ತು.ಆಗಿನಿಂದ ಕೆಲಸ ಇಲ್ಲದೇ ಖಾಲಿ‌ ಇದ್ದ ಖತರ್ನಾಕ್ ಶಿವಶಂಕರ್ ಎನ್ನುವ ಹೆಸರಲ್ಲಿ‌ ನಕಲಿ‌ ಫೇಸ್ ಬುಕ್ ಖಾತೆ ತೆರೆದಿದ್ದ.ನವಂಬರ್ ನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದ ಗೋಪಿಚಂದ್.ನಮ್ಮದು ಕನ್ಸಲ್ಟೆನ್ಸಿ ಕೆಲಸ ಕೊಡಿಸುತ್ತೇವೆ ಎಂದು ಜಾಹಿರಾತು ನೀಡಿದ್ದ.ಆಸಕ್ತಿ ಇರುವವರು ಸಂಪರ್ಕಿಸಿದಾಗ ಬಲೆ ಹಾಕ್ತಿದ್ದ.ಕೇವಲ‌ ಮೆಸೆಂಜರ್ ನಲ್ಲಿ ಮಾತ್ರ ಸಂಪರ್ಕ ಮಾಡ್ತಿದ್ದ ಆರೋಪಿ.ಕೆಲಸ ಕೊಡಿಸಲು ನಾಲ್ಕೈದು ಲಕ್ಷಕ್ಕೆ ಡಿಮ್ಯಾಂಡ್ ಮಾಡ್ತಿದ್ದ.ದುಡ್ಡು ಇದ್ಯೋ‌ ಇಲ್ವೋ ಅನ್ನೋದನ್ನ ತಿಳಿಯಲು ಅಕೌಂಟ್ ಬ್ಯಾಲೆನ್ಸ್ ಸ್ಕ್ರೀನ್ ಶಾಟ್ ಕಳುಹಿಸಿಕೊಳ್ತಿದ್ದ ಇಷ್ಟೇ ಅಲ್ಲ ಆರೋಪಿ ಗೋಪಿಚಂದ್ ಜನವರಿಯಲ್ಲಿ ಕುಶಾಲನಗರಕ್ಕೆ ಪತ್ನಿ ಜೊತೆಗೆ ಟ್ರಿಪ್ ಹೋಗಿದ್ದ .ಅಲ್ಲಿ ಐಷಾರಾಮಿ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದ.ವೈಫೈ ಇದ್ರೂ ಇಲ್ಲ ಅಂತಾ ಗಲಾಟೆ ಮಾಡಿದ್ದ .ನಂತರ ಒಂದು ಡಾಂಗಲ್ ಅನ್ನು ರೆಸಾರ್ಟ್ ನವರ ಬಳಿಯಿಂದ ತೆಗೆದುಕೊಂಡಿದ್ದ.ಡಾಂಗಲ್ ನಲ್ಲಿದ್ದ ಸಿಮ್ ಕಾರ್ಡ್ ತೆಗೆದು ತನ್ನ ಮೊಬೈಲ್ ಗೆ ಹಾಕಿಕೊಂಡು ಅದರಲ್ಲಿ ಓಟಿಪಿ ಪಡೆದು ರೆಸಾರ್ಟ್ ಹೆಸರಿನ ಸಿಮ್ ನಲ್ಲಿ ವಾಟ್ಸ್ ಆ್ಯಪ್ ಕ್ರಿಯೇಟ್ ಮಾಡಿಕೊಂಡಿದ್ದ.ನಂತರ ಸಿಮ್ ಕಾರ್ಡ್ ಅದೇ ಡಾಂಗಲ್ ನಲ್ಲಿ ಹಾಕಿ ಹಿಂದಿರುಗಿಸಿದ್ದ.ವಾಟ್ಸ್ ಆ್ಯಪ್ ನಂಬರ್ ಕೆಲಸ ಬೇಕು ಎಂದು ಕೇಳಿದವರಿಗೆ ಕೊಡ್ತಿದ್ದ..ಕೇವಲ ವಾಟ್ಸ್ ಆ್ಯಪ್ ಕಾಲ್ ಮಾತ್ರ ಮಾಡುವಂತೆ ಹೇಳ್ತಿದ್ದ.ಇದೇ ನಂಬರ್ ಅನ್ನು ಆತನ ಮೋಸದ ಕೃತ್ಯಕ್ಕೆ ಬಳಸಿಕೊಳ್ತಿದ್ದ‌..
ಬೆಂಗಳೂರಿಗೆ ಬಂದಿದ್ದ ಪ್ರದೀಪ್ ಬಳಿ ೯೫ ಸಾವಿರ ಆನ್ ಲೈನ್ ಮೂಲಕ.ಎಟಿಎಂ ನಲ್ಲಿ 30 ಸಾವಿರ ವಿತ್ ಡ್ರಾ ಮಾಡಿಸಿಕೊಂಡಿದ್ರು.ಆತನ ಪರಿಚಯಸ್ಥ ಇಬ್ಬರು ಯುವತಿಯರಿಂದ 4 ಲಕ್ಷ ಹಣ ಹಾಕಿಸಿಕೊಂಡಿದ್ರು.ಸುಳಿವು ಬಿಟ್ಟು ಕೊಡಬಾರದು ಅಂತಾ ಕ್ರಿಕೆಟ್ ಬೆಟ್ಟಿಂಗ್ ಅಕೌಂಟ್ ಗೆ ಹಣ ಸಂದಾಯ ಮಾಡಿಸಿಕೊಳ್ತಿದ್ರು.ನಂತರ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ರು.ಸದ್ಯ ಆರೋಪಿಗಳನ್ನ ಬಂಧಿಸಿರೊ ಪೊಲೀಸರು ವಿಚಾರಣೆ ವೇಳೆ ಆಂದ್ರದಲ್ಲೂ ಇದೇ ರೀತಿ ಕೃತ್ಯ ಮಾಡಿರೋದು ಬೆಳಕಿಗೆ ಬಂದಿದೆ.ಸದ್ಯ ಬಂಧಿತರ ಬ್ಯಾಂಕ್ ಖಾತೆಯಲ್ಲಿದ್ದ 5 ಲಕ್ಷದ 95 ಸಾವಿರ ಹಣ ಫ್ರೀಜ್ ಮಾಡಿದ್ದು  ಕೃತ್ಯಕ್ಕೆ ಬಳಸಿದ್ದ 2 ಕಾರುಗಳನ್ನ ವಶಕ್ಕೆ ಪಡೆಯಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ದಂಪತಿಗಳನ್ನ ಬೆದರಿಸಿ ಹಣ ಸುಲಿಗೆ ಮಾಡಿದ ಕಾನ್ಸ್ಟೇಬಲ್ ಸಸ್ಪೆಂಡ್