Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿ ಭವನದ ಹೊಟೇಲ್ ದೋಸೆಗೆ ಫುಲ್ ಡಿಮ್ಯಾಂಡ್

webdunia
bangalore , ಶುಕ್ರವಾರ, 3 ಫೆಬ್ರವರಿ 2023 (17:17 IST)
ನಾವು ಸಾಮಾನ್ಯವಾಗಿ ಹೋಟೆಲ್ ಗೆ ಹೊಗಿ ತಿಂಡಿ ತಿಂದು ಬರ್ತಿವಿ, ಕೆಲವೊಮ್ಮೆ ಅಲ್ಲಿ ಕಾಣೋ ಕೆಲವೊಂದು ಅಚ್ಚರಿಯ ಕೆಲಸವನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಮೆಚ್ಚುಗೆಯನ್ನ ಸಹ ವ್ಯಕ್ತ ಪಡಿಸ್ತೀವಿ..ಅದೇ ರೀತಿಯಲ್ಲಿ ಇಲ್ಲೊಬ್ಬ ಮಾಣಿಯ ಕೆಲಸಕ್ಕೆ ಜನರು ಅಚ್ಚರಿಯನ್ನ ವ್ಯಕ್ತ ಪಡಿಸಿದ್ದಾರೆ .ಸಿಲಿಕಾನ್ ಸಿಟಿಯಲ್ಲಿ ಜನ  ಫುಲ್ ಬ್ಯುಸಿಯಾಗಿ ಇರ್ತಾರೆ, ಬೆಳಗೆದ್ದು ಕೆಲಸಕ್ಕೆ ಹೋಗೋವಾಗ ಮನೇಲಿ ತಿಂಡಿ ತಿನ್ನೊದು ಲೇಟ್ ಆಯ್ತು ಅಂದ್ರೆ, ಕೆಲ್ಸಕ್ಕೆ ಹೋಗ್ತಾ ತಿಂಡಿ ತಿಂದ್ರೆ ಆಯ್ತು ಅಂತೇಳಿ ಹೋಟೆಲ್ ಗೆ ಹೊಗ್ತಾರೆ..ಹೊಟೆಲ್ ಗೆ ಹೊದ್ರು ಅಲ್ಲಿ ಇರೋ ಜನಗಳಿಗೆ ಮಾಣಿ ಬೇಗ ಬೇಗ ತಿಂಡಿಯನ್ನ ಸರ್ವ್ ಮಾಡಿದ್ರೆ ಸಾಕಪ್ಪ.ಕೆಲ್ಸಕ್ಕೆ ಲೇಟ್ ಆಯ್ತು ಅಂಥ ಚಿಂತೆ ಮಾಡೋರೆ ಜಾಸ್ತಿ ಆದ್ರೆ ಇಲ್ಲೊಬ್ಬ ಮಾಣಿ ಸರ್ವ್ ಮಾಡೋ ಕೆಲಸಕ್ಕೆ ಜನ ಫುಲ್ ಫಿದಾ ಆಗಿದ್ದು, ಈ ಮಾಣಿಯ ಕೆಲಸ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗ್ತಾ ಇದೆ.

ಈ ಹೊಟೆಲ್ ನ ಅಡುಗೆ ಕೋಣೆಯಲ್ಲಿ ಭಟ್ಟರೊಬ್ಬರು ಹೆಂಚಿನ ಮೇಲೆ ದೊಸೆಗಳನ್ನು ಸಿದ್ದಪಡಿಸ್ತಾರೆ,ಪಕ್ಕದಲ್ಲಿ ವೇಟರ್ ಪ್ಲೇಟ್ಗಳನ್ನು ಹಿಡಿದು ರೆಡಿಯಾದ ದೋಸೆಗಳನ್ನು ಹಾಕಿಸಿಕೊಂಡು ಒಂದಾದ ಮೇಲೆ ಒಂದಂತೆ ತನ್ನ ಕೈಯಲ್ಲಿ ಬರೋಬ್ಬರಿ 16 ದೋಸೆಗಳಿರುವ ಪ್ಲೇಟ್ಗಳನ್ನು ಅಂಗೈನಿಂದ ಭುಜದ ವರೆಗೆ ಇರಿಸಿಕೊಳ್ಳುತ್ತಾ ಅಷ್ಟೂ ಪ್ಲೇಟ್ ಗಳನ್ನು ಒಂದು ಚೂರು ಅಳ್ಳಾಡದ ಹಾಗೆ ಬ್ಯಾಲೆನ್ಸ್ ಮಾಡ್ತಾರೆ ನಂತರ ಹೋಟೆಲ್ ಹಾಲ್ ಗೆ ತೆರಳಿ ಗ್ರಾಹಕರು ಕೂತಿರುವ ಟೇಬಲ್ ಗಳ ಮೇಲೆ ಇಡ್ತಾರೆ.ಈ ವೈಟರ್ ಒಂದೇ ಬಾರಿಗೆ 16 ದೋಸೆಗಳನ್ನು ತಂದು ಟೇಬಲ್ಗಳ ಮೇಲೆ ಇಡುವ ಶೈಲಿ ನೋಡಿ ಅಲ್ಲಿನ ಜನ ಭಾರಿ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದು, ಅ ಹೋಟೆಲ್ ಗೆ ತಿನ್ನಲು ಹೋದ ಜನ ಆ ವೈಟರ್ ದೋಸೆ ಸರ್ವ್ ಮಾಡೋ ವೀಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತಿದ್ದು,ಇದೀಗ ಈ ವೀಡಿಯೋ ಭಾರಿ ವೈರಲ್ ಆಗ್ತಾಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪರಮೇಶ್ವರ ಕೊಡುಗೆ ಬಗ್ಗೆ ಡಿಕೆಶಿ ಶ್ಲಾಘನೆ