Select Your Language

Notifications

webdunia
webdunia
webdunia
webdunia

ಅಮೂಲ್ ನ ವಿವಿಧ ಹಾಲು ಉತ್ಪನ್ನಗಳ ಬೆಲೆ ಏರಿಕೆ

webdunia
bangalore , ಶುಕ್ರವಾರ, 3 ಫೆಬ್ರವರಿ 2023 (17:27 IST)
ಭಾರತದ ಅತಿದೊಡ್ಡ ಹಾಲು ಮಾರಾಟ ಸಂಸ್ಥೆ ಎನಿಸಿರುವ ಅಮುಲ್ ಹಾಲಿನ ದರಗಳನ್ನು ಹೆಚ್ಚಿಸಿದೆ. ಅಮೂಲ್ನ ವಿವಿಧ ಹಾಲು ಉತ್ಪನ್ನಗಳ ಬೆಲೆ ಮೂರು ರೂಪಾಯಿಯಷ್ಟರವರೆಗೂ ಹೆಚ್ಚಳವಾಗಿದೆ. ಗುಜರಾತ್ ಮೂಲದ ಅಮೂಲ್ ಸಂಸ್ಥೆ ಇತ್ತೀಚೆಗೆ ಕೆಲವು ಬಾರಿ ಹಾಲಿನ ಬೆಲೆಗಳನ್ನು ಹೆಚ್ಚಿಸಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ 2 ರೂಪಾಯಿಯಷ್ಟು ಬೆಲೆ ಹೆಚ್ಚಳ ಮಾಡಿತ್ತು. ಅಮೂಲ್ ತಾಜಾ ಹಾಲು ಬೆಲೆ ಒಂದು ಲೀಟರ್ಗೆ 54 ರೂ ಗೆ ಹೆಚ್ಚಾಗಿದೆ. ಹಸು ಹಾಲಿನ ಬೆಲೆ 56 ರೂ, ಎಮ್ಮೆ ಹಾಲಿನ ಬೆಲೆ 70 ರೂಪಾಯಿಗೆ ಹೆಚ್ಚಾಗಿದೆ. ಇನ್ನು ಅಮೂಲ್ ಗೋಲ್ಡ್ ಹಾಲು ಒಂದು ಲೀಟರ್ಗೆ 66 ರೂ ಇದೆ. ಹಾಲಿನ ಉತ್ಪಾದನೆ ಮತ್ತು ಕಾರ್ಯನಿರ್ವಹಣೆಯ ವೆಚ್ಚ ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದನಗಳ ಮೇವಿನ ದರ ಶೇ. 20ರಷ್ಟು ಹೆಚ್ಚಾಗಿದೆ. ಇದರಿಂದ ಗ್ರಾಹಕರಿಗೆ ಹಾಲಿನ ಬೆಲೆ ಹೆಚ್ಚಿಸುವುದು ಅನಿವಾರ್ಯ ಎಂದು ಅಮೂಲ್ ತನ್ನ ಬೆಲೆ ಏರಿಕೆ ಕ್ರಮ ಸಮರ್ಥನೆ ಮಾಡಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿ ಭವನದ ಹೊಟೇಲ್ ದೋಸೆಗೆ ಫುಲ್ ಡಿಮ್ಯಾಂಡ್