Select Your Language

Notifications

webdunia
webdunia
webdunia
webdunia

ದಂಪತಿಗಳನ್ನ ಬೆದರಿಸಿ ಹಣ ಸುಲಿಗೆ ಮಾಡಿದ ಕಾನ್ಸ್ಟೇಬಲ್ ಸಸ್ಪೆಂಡ್

The constable who threatened the couple and extorted money was suspended
bangalore , ಶುಕ್ರವಾರ, 3 ಫೆಬ್ರವರಿ 2023 (18:50 IST)
ದಂಪತಿಗಳನ್ನ ಬೆದರಿಸಿ ಹಣ ಸುಲಿಗೆ ಮಾಡಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನ ಸೇವೆಯಿಂದ ವಜಾಗೊಳಿಸಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶಿಸಿದ್ದಾರೆ‌.ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟಟೇಬಲ್ ರಾಜೇಶ್ ಹಾಗೂ ಕಾನ್ಸ್ಟೇಬಲ್ ನಾಗೇಶ್ ವಜಾಗೊಂಡ ಸಿಬ್ಬಂದಿಗಳು.
 
ಡಿಸೆಂಬರ್ 8ರ ರಾತ್ರಿ‌ 11 ಗಂಟೆ ಸುಮಾರಿಗೆ ಮಾನ್ಯತಾ ಟೆಕ್​ಪಾರ್ಕ್​ ಬಳಿ ತನ್ನ ಪತ್ನಿಯೊಂದಿಗೆ ನಡೆದುಕೊಂಡು ಬರುತ್ತಿದ್ದ ಕಾರ್ತಿಕ್ ಎಂಬಾತನನ್ನ ತಡೆದಿದ್ದ ಹೊಯ್ಸಳ ಸಿಬ್ಬಂದಿ, ಆಧಾರ್ ಕಾರ್ಡ್ ಸೇರಿದಂತೆ ಐಡೆಂಟಿಟಿ ದಾಖಲೆಗಳನ್ನ ಪರಿಶೀಲಿಸಿದ್ದರು. 'ಮನೆಯ ಸಮೀಪದಲ್ಲೇ ಇದ್ದೇವೆ, ಮೇಲಾಗಿ 11 ಗಂಟೆಯ ಸುಮಾರಿಗೆ ಓಡಾಟಕ್ಕೆ ನಿರ್ಬಂಧವಿದೆಯೇ?' ಎಂದು ಪ್ರಶ್ನಿಸಿದಾಗ, 3 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡುವುದಿಲ್ಲ ಎಂದಾಗ ಬೆದರಿಕೆ ಹಾಕಿ, 1 ಸಾವಿರ ರೂಗಳನ್ನ ಡಿಜಿಟಲ್ ಪೇಮೆಂಟ್ ಮೂಲಕ ಪಡೆದು ಸ್ಥಳದಿಂದ ತೆರಳಿದ್ದರು. ಹೊಯ್ಸಳ ಸಿಬ್ಬಂದಿಗಳ ನಡೆಯ ಕುರಿತು ಟ್ವೀಟ್​​ ಮಾಡಿದ್ದ ಕಾರ್ತಿಕ್, ತಮಗಾದ ಅನುಭವ ಹಂಚಿಕೊಂಡಿದ್ದರು. ಬಳಿಕ ಇಬ್ಬರೂ ಸಿಬ್ಬಂದಿಯನ್ನ ಅಮಾನತ್ತುಗೊಳಿಸಿ ಆದೇಶಿಸಿದ್ದ ಈಶಾನ್ಯ ವಿಭಾಗದ ಡಿಸಿಪಿ ಇಲಾಖಾ ತನಿಖೆಗೆ ಆದೇಶಿಸಿದ್ದರು.
 
ಇಬ್ಬರೂ ಸಿಬ್ಬಂದಿಗಳ ವಿರುದ್ಧ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ‌
 

Share this Story:

Follow Webdunia kannada

ಮುಂದಿನ ಸುದ್ದಿ

ಟ್ರಾಫಿಕ್ ಫೈನ್ ಪಾವತಿಸಲು 50% ಆಫರ್