Select Your Language

Notifications

webdunia
webdunia
webdunia
Sunday, 13 April 2025
webdunia

24 ಗಂಟೆಯೊಳಗೆ ಮಹಿಳೆ ಗುರುತು ಪತ್ತೆ ಹಚ್ಚಿದ ಪೊಲೀಸರು

The police identified the woman within 24 hours
bangalore , ಶುಕ್ರವಾರ, 3 ಫೆಬ್ರವರಿ 2023 (18:57 IST)
ಅದು ಮಲಯಾಳಂನ ಖ್ಯಾತ ಥ್ರಿಲ್ಲರ್ ಸಿನಿಮಾ 'ಕೋಲ್ಡ್ ಕೇಸ್. ಕೇವಲ ಮಹಿಳೆಯ ತಲೆಬುರುಡೆ ಹಿಡಿದು ಸಾಗೋ ಪೊಲೀಸರು, ಸಣ್ಣ ಕ್ಲೂ ಹಿಡಿದು ಕೇಸ್ ನ್ನ ಸಾಲ್ವ್ ಮಾಡ್ತಾರೆ. ತೇಟ್ ಅದೇ ರೀತಿಯ ಪ್ರಕರಣವೊಂದು ಇದೀಗ ಬೆಂಗಳೂರು ಪೊಲೀಸರ ತನಿಖೆಗೆ ಬಂದಿದೆ.ಈ ಪೋಟೋಗಳನ್ನೊಮ್ಮೆ ನೋಡಿ. ಸತ್ತು ಆರು ತಿಂಗಳಾಗಿರೋ ಮೃತದೇಹ.. ಮೂಳೆ ತಲೆಬುರುಡೆ ಬಿಟ್ರೆ ಬೇರೇನು ಇಲ್ಲ. ಅಂದಹಾಗೇ ಹೀಗೆ ಸತ್ತು ಆರು ತಿಂಗಳ ಬಳಿಕ ಪತ್ತೆಯಾಗಿರುವ ಈಕೆಯ ಹೆಸರು ಪುಷ್ಪ ದಾಮಿ. ನೇಪಾಳ ಮೂಲದ ದಾಮಿ ಎಂಬಾತನ ಪತ್ನಿ.. ಕಳೆದ ವರ್ಷ ಜುಲೈನಲ್ಲಿ ನಿಗೂಡವಾಗಿ ಕಾಣೆಯಾಗಿದ್ದ ಈಕೆ 6 ತಿಂಗಳ ಬಳಿಕ ಹೀಗೆ ಅಸ್ಥಿಪಂಜರವಾಗಿ ಪತ್ತೆಯಾಗಿದ್ದಾಳೆ.

ನಿನ್ನೆ ಬೆಂಗಳೂರಿನ ಹುಳಿಮಾವು ಠಾಣಾ ವ್ಯಾಪ್ತಿಯ ಅಕ್ಷಯನಗರದ ಕಡೆ ಹೋಗಿದ್ದ ಹುಳಿಮಾವು ಪೊಲೀಸ್ರು, ಮೂತ್ರ ವಿಸರ್ಜನೆಗೆ ಅಂತ ಪಕ್ಕದಲ್ಲೇ ಇದ್ದ ನಿರ್ಜನ ಪ್ರದೇಶಕ್ಕೆ ಹೋಗಿದ್ದು,  ಈ ವೇಳೆ ಅಚಾನಕ್ಕಾಗಿ ಪೊದೆಯೊಳಗೆ ಅಸ್ಥಿಪಂಜರ ಕಂಡುಬಂದಿದೆ.. ಕೂಡಲೇ ಪೊಲೀಸ್ರು ಒಳಗೆ ಹೋಗಿ ಪರಿಶೀಲನೆ ಮಾಡಿದ್ದು, ವ್ಯಕ್ತಿಯೊಬ್ಬರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.. ಆದ್ರೆ ಆ ಮೃತದೇಹ ಹೆಣ್ಣಾ ಅಥವಾ ಗಂಡಾ ಅನ್ನೋ ಯಾವುದೇ ಕುರುಹು ಇರ್ಲಿಲ್ಲ..  ನಂತರ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ಪೊಲೀಸರು, 24 ಗಂಟೆ ಕಳೆಯುವಷ್ಟರಲ್ಲಿ ಮೃತಳ ಚಪ್ಪಲಿ ಹಾಗೂ ಆಕೆ ತೊಟ್ಟಿದ್ದ ನೆಕ್ಲೆಸ್ ಮೂಲಕ ಆಕೆಯ ಚಹರೆ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನೂ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಅಸ್ಥಿಪಂಜರ ನೇಪಾಳ ಮೂಲದ ಪುಷ್ಪಾ ದಾಮಿ ಎಂಬ ಮಹಿಳೆಯದ್ದು ಎಂಬುದು ಪತ್ತೆಯಾಗದೆ. ನೇಪಾಳ ಮೂಲದ ಪುಷ್ಪಾ ದಾಮಿ ಹಾಗೂ ಆಕೆಯ ಪತಿ ಅಮರ್ ದಾಮಿ ಹುಳಿಮಾವು ಠಾಣಾ ವ್ಯಾಪ್ತಿಯ ಅಕ್ಷಯ ನಗರದಲ್ಲಿ ವಾಸವಿದ್ದರು. ಪತಿಯ ಮದ್ಯಪಾನದ ಚಟಕ್ಕೆ ಬೇಸತ್ತ ಪುಷ್ಪಾ ನೇಪಾಳಕ್ಕೆ ಹೋಗಲು ಬಯಸಿದ್ದಳು. ಇದೇ ವಿಚಾರವಾಗಿ ಮನೆಯಲ್ಲಿ ಇಬ್ಬರ ನಡುವೆ ಗಲಾಟೆಗಳಾಗುತ್ತಿದ್ದವು. ಕಳೆದ ವರ್ಷ ಜುಲೈ 8ರಂದು ಗಂಡನ ಮೇಲೆ ಕೋಪಗೊಂಡು ಮನೆಯಿಂದ ತೆರಳಿದ್ದ ಪುಷ್ಪಾ ಪುನಃ ವಾಪಾಸಾಗಿರಲಿಲ್ಲ. ಪತ್ನಿ ಕಾಣೆಯಾಗಿರುವ ಬಗ್ಗೆ ಹುಳಿಮಾವು ಠಾಣೆಯಲ್ಲಿ ಅಮರ್ ದಾಮಿ ಪ್ರಕರಣ ದಾಖಲಿಸಿದ್ದ. ಇದೀಗ ಪೊಲೀಸರು ಒಂದು ವರ್ಷದಿಂದ ಕಾಣೆಯಾದ ಪ್ರಕರಣಗಳನ್ನ ಪರಿಶೀಲಸಿ ಪುಷ್ಪ ಪತಿಯನ್ನ ಕರೆಸಿದ್ದಾರೆ. ಆಕೆಯ ಚಪ್ಪಲಿ ಮತ್ತು ಆಕೆ ಧರಿಸಿದ್ದ ನೆಕ್ಲೆಸ್ ನೋಡಿ ಅದು ಪುಷ್ಪಾ ದಾಮಿಯದ್ದೆ ಶವ ಎಂದು ಪತ್ತೆ ಹಚ್ಚಲಾಗಿದೆ.ಸದ್ಯ ಅಸ್ಥಿಪಂಜರ ಹಿಡಿದು ಹೊರಟ ಹುಳಿಮಾವು ಪೊಲೀಸರು, ಮಹಿಳೆ ಯಾರೂ ಎಂಬುದನ್ನ ಪತ್ತೆ ಹಚ್ಚಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಲಸ ಕೊಡಿಸ್ತೇವೆ ಅಂತಾ ಬೆಂಗಳೂರಿಗೆ ಕರೆಸಿಕೊಂಡು ರಸ್ತೆಗೆ ಬಿಸಾಡಿದ್ರು..!