ಪಕ್ಷ ಹೇಳಿದ ಕೆಲಸ ಮಾಡಬೇಕು: ಡಿಕೆ ಶಿವಕುಮಾರ್ ಗೆ ಕೌಂಟರ್ ಕೊಟ್ಟ ಯತೀಂದ್ರ ಸಿದ್ದರಾಮಯ್ಯ

Krishnaveni K
ಶುಕ್ರವಾರ, 26 ಡಿಸೆಂಬರ್ 2025 (10:28 IST)
ಮೈಸೂರು: ಯಾರಿಗೇ ಆಗಲಿ ಅಧಿಕಾರ ಶಾಶ್ವತ ಅಲ್ಲ. ಪಕ್ಷ ಹೇಳಿದ ಕೆಲಸ ಮಾಡಬೇಕು ಎಂದು ಡಿಕೆ ಶಿವಕುಮಾರ್ ಗೆ ಸಿಎಂ ಸಿದ್ದರಾಮಯ್ಯ ಪುತ್ರ ಎಂಎಲ್ ಸಿ ಡಾ ಯತೀಂದ್ರ ಸಿದ್ದರಾಮಯ್ಯ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಪಕ್ಷದಲ್ಲಿ ಸುಮ್ಮನೇ ನಾಯಕನಾಗಿಲ್ಲ. ಬರೀ ಭಾಷಣ ಮಾಡಿಕೊಂಡು ನಾಯಕನಾಗಿಲ್ಲ. ಪಕ್ಷಕ್ಕಾಗಿ ಬಾವುಟ ಕಟ್ಟಿದ್ದೀನಿ, ಕಸವನ್ನೂ ಗುಡಿಸಿದ್ದೀನಿ ಎಂದು ಡಿಕೆ ಶಿವಕುಮಾರ್ ನಿನ್ನೆ ಸಿದ್ದರಾಮಯ್ಯ ಬಣಕ್ಕೆ ಟಾಂಗ್ ಕೊಟ್ಟಿದ್ದರು. ಡಿಕೆಶಿ ಹೇಳಿಕೆಗೆ ಈಗ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

‘ಸಿಎಂ ಇರಲಿ ಡಿಸಿಎಂ ಇರಲಿ ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಪಕ್ಷ ಹೇಳುವ ಕೆಲಸ ಮಾಡಬೇಕು. ಪಕ್ಷ ಹೇಳಿದಂತೆ ಪಾಲಿಸಬೇಕಾದ್ದು ಎಲ್ಲಾ ಕಾರ್ಯಕರ್ತರ ಕರ್ತವ್ಯ. ನಾವೆಲ್ಲರೂ ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡಬೇಕು. ಪಕ್ಷ ಕಟ್ಟುವುದು, ಪಕ್ಷದ ಆದೇಶಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಈ ಜವಾಬ್ಧಾರಿಯನ್ನು ನಾವೆಲ್ಲರೂ ನಿಭಾಯಿಸಬೇಕು’ ಎಂದು ಅವರು ಪರೋಕ್ಷವಾಗಿ ಡಿಕೆಶಿ ಹೇಳಿಕೆಗೆ ಕೌಂಟರ್ ಕೊಟ್ಟಿದ್ದಾರೆ.

ಇದು ಡಿಕೆಶಿ ಹೇಳಿಕೆಗೇ ಕೌಂಟರ್ ಎಂದು ವಿಶ್ಲೇಷಿಸಲಾಗುತ್ತಿದೆ. ಇದರೊಂದಿಗೆ ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಸ್ತಾಂತರ ವಿಚಾರ ತಾರಕಕ್ಕೇರಿರುವಂತೆ ಕಂಡುಬರುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಳ್ಳಾರಿ ಶೂಟೌಟ್ ಗೆ ಐಪಿಎಸ್ ವರ್ತಿಕಾ ಕಟಿಯಾರ್ ತಲೆದಂಡ

ಪೊಲೀಸರಿಂದಲೇ ಬಿಜೆಪಿ ಕಾರ್ಯಕರ್ತೆಯ ಬಟ್ಟೆ ಬಿಚ್ಚಿಸಿದ ಆರೋಪ: ಆರ್ ಅಶೋಕ್ ಹೇಳಿದ್ದೇನು

Gold price: ದಾಖಲೆ ಬರೆದ ಬೆಳ್ಳಿ ಬೆಲೆ, ಚಿನ್ನದ ಬೆಲೆ ಎಷ್ಟಾಗಿದೆ ನೋಡಿ

ಯಪ್ಪಾ.. ಈ ಪೂಜಾರಿಯ ಮಂತ್ರ ಕೇಳಿದ್ರೆ ಶನಿ ದೇವ ಲೋಕ ಬಿಟ್ಟು ಓಡಿ ಹೋಗ್ಬೇಕು Video

ಮೈಸೂರಿನಲ್ಲಿ ಹೆದ್ದಾರಿಯಲ್ಲೇ ಅಪಾಯಕಾರಿ ವೀಲಿಂಗ್ ಮಾಡಿದ ಯುವಕರು Video

ಮುಂದಿನ ಸುದ್ದಿ
Show comments