Publish Date: Thu, 25 Dec 2025 (18:22 IST)
Updated Date: Thu, 25 Dec 2025 (18:24 IST)
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಪಕ್ಷದೊಳಗೆ ಭುಗಿಲೆದ್ದಿರುವ ಆಂತರಿಕ ಕಚ್ಚಾಟವನ್ನು ಸರಿಪಡಿಸುವ ಕೆಲಸವನ್ನು ಕಾಂಗ್ರೆಸ್ ಹೈಕಮಾಂಡ್ ಮಾಡಬೇಕೆಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರದ ಆಂತರಿಕ ಗೊಂದಲಗಳು ಮುಂಬರುವ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ. ಹೈಕಮಾಂಡ್‌ನವರು ಇದನ್ನು ಸರಿಪಡಿಸುವ ಕೆಲಸ ಮಾಡಬೇಕು, ಇಲ್ಲದಿದ್ದರೆ ಕಷ್ಟವಾಗಲಿದೆ ಎಂದರು.
ರಾಜಣ್ಣ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ. ಆಗಿರೋದು ಆಗಿ ಹೋಗಿದೆ, ಮುಂದೇನು ಅನ್ನೋದು ನೋಡಬೇಕು ಎಂದು ತಿಳಿಸಿದರು.
ಈಗ 2028ಕ್ಕೆ ಚುನಾವಣೆ ಬರೋದು. ಬಿಎಲ್‌ಎಗಳು ಏನೇನು ಹೊಸ ಪ್ರಯೋಗ ಮಾಡ್ತಾರೆ. ಅದರ ಬಗ್ಗೆ ನಾವು ಮುನ್ನೆಚ್ಚರಿಕೆ ಇರಬೇಕೆಂದರು. ನಮ್ಮ ಅಧ್ಯಕ್ಷರು ಬಹಳ ಸ್ಪಷ್ಟವಾಗಿ ಹೇಳಿದ್ದಾರಲ್ಲ. ನೀವು ನೀವೇ ಬಗೆಹರಿಸಿಕೊಳ್ಳಿ ಅಂತ. ಹಾಗಾಗಿ, ಅವರಿಬ್ಬರೇ ಬಗೆಹರಿಸಿಕೊಳ್ಳಬೇಕೆಂದರು.