Daily Horoscope

Select Your Language

Notifications

webdunia
webdunia
webdunia
webdunia

ಪಕ್ಷಕ್ಕಾಗಿ ಬಾವುಟ ಕಟ್ಟಿದ್ದೀನಿ, ಕಸ ಗುಡಿಸಿದ್ದೀನಿ, ಸುಮ್ನೇ ನಾಯಕ ಆಗಿಲ್ಲ ಎಂದ ಡಿಕೆ ಶಿವಕುಮಾರ್: ಪಬ್ಲಿಕ್ ಹೇಳಿದ್ದೇನು

DK Shivakumar
ಬೆಂಗಳೂರು: ಪಕ್ಷಕ್ಕಾಗಿ ಬಾವುಟ ಕಟ್ಟಿದ್ದೀನಿ, ಕಸ ಗುಡಿಸಿದ್ದೀನಿ, ಸುಮ್ನೇ ಭಾಷಣ ಮಾಡಿಕೊಂಡು ನಾಯಕ ಆಗಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದು ಇದಕ್ಕೆ ಪಬ್ಲಿಕ್ ಸೋಷಿಯಲ್ ಮೀಡಿಯಾಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.
 

ರಾಜ್ಯದಲ್ಲಿ ಅಧಿಕಾರ ಹಂಚಿಕೆ ವಿಚಾರವಾಗಿ ಡಿಕೆ ಶಿವಕುಮಾರ್ ನಿನ್ನೆ ಮಾಧ್ಯಮಗಳ ಜೊತೆ ಮಾತನಾಡುವಾಗ ಪರೋಕ್ಷವಾಗಿ ಸಿದ್ದರಾಮಯ್ಯ ಆಂಡ್ ಟೀಂಗೆ ಟಾಂಗ್ ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಒಬ್ಬರೇ ಪಕ್ಷ ಕಟ್ಟಿಲ್ಲ ಎಂದು ಸಿದ್ದು ಬಣ ಹೇಳುತ್ತಲೇ ಇದೆ. ಇದಕ್ಕೆ ಪ್ರತಿಯಾಗಿ ಡಿಕೆಶಿ ಈಗ ಪರೋಕ್ಷವಾಗಿ ಈ ರೀತಿ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ.

ಇನ್ನು ಸಿಡಬ್ಲ್ಯುಸಿ ಸಭೆಗೆ ಡಿಕೆ ಶಿವಕುಮಾರ್ ಅವರನ್ನು ಕರೆದಿಲ್ಲ. ಕೇವಲ ಸಿಎಂ ಸಿದ್ದರಾಮಯ್ಯಗೆ ಮಾತ್ರ ಹೈಕಮಾಂಡ್ ಆಹ್ವಾನ ನೀಡಿದೆ. ಇತ್ತ ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿಗೂ ಅವಕಾಶ ಸಿಗುತ್ತಿಲ್ಲ. ಇದು ಡಿಕೆಶಿ ಪರೋಕ್ಷ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.


ಇನ್ನು, ಡಿಕೆಶಿ ಪಕ್ಷದಲ್ಲಿ ಬಾವುಟ ಕಟ್ಟಿದ್ದೇನೆ, ಕಸವನ್ನೂ ಗುಡಿಸಿದ್ದೇನೆ ಎಂಬ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಕಾಮೆಂಟ್ ಗಳು ಬಂದಿವೆ. ಪಾಪ ಇಷ್ಟೆಲ್ಲಾ ಮಾಡಿರೋ ಡಿಕೆಶಿಯನ್ನು ಈ ರೀತಿ ನಡೆಸಿಕೊಳ್ಳಬಾರದಿತ್ತು ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ಅರಮನೆ ಮುಂಭಾಗವೇ ಸ್ಪೋಟ, ಓರ್ವನ ಸಾವು: ಕಾರಣ ಪತ್ತೆ ಮಾಡಿದ ಪೊಲೀಸರು video