Select Your Language

Notifications

webdunia
webdunia
webdunia
webdunia

ಬಿಎಸ್ವೈಗೆ ಆಡಿಯೋ ಸಂಕಷ್ಟ ದೂರ ಮಾಡಲು ನಡೆಯಿತು ಪೂಜೆ!

ಬಿಎಸ್ವೈಗೆ ಆಡಿಯೋ ಸಂಕಷ್ಟ ದೂರ ಮಾಡಲು ನಡೆಯಿತು ಪೂಜೆ!
ಮಂಡ್ಯ , ಬುಧವಾರ, 13 ಫೆಬ್ರವರಿ 2019 (15:43 IST)
ಆಪರೇಷನ್ ಕಮಲ ಆಡಿಯೋ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಯಡಿಯೂರಪ್ಪನವರಿಗೆ ಸಂಕಷ್ಟ ತಂದೊಡ್ಡಿದ್ದರೆ, ಇತ್ತ ಬಿಎಸ್ವೈ ಗೆ ಸಂಕಷ್ಟಗಳು ಬರದೇ ಇರಲಿ ಎಂದು ಗ್ರಹಗತಿಗಳ ಶಾಂತಿಗೆ ಪೂಜೆ ಸಲ್ಲಿಸಲಾಗಿದೆ.

ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪನವರಿಗೆ ಆಡಿಯೋ ಸಂಕಷ್ಟ ಎದುರಾಗಿರುವ ಹಿನ್ನೆಲೆ ಗ್ರಹಗತಿಗಳ ಶಾಂತಿಗಾಗಿ ಮಂಡ್ಯದ ಬಿಜೆಪಿ ಕಾರ್ಯಕರ್ತರು ಶಕ್ತಿ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಂಡ್ಯ ನಗರದ ಶಕ್ತಿ ದೇವತೆ ಕಾಳಿಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಿಎಸ್‌ವೈ ಹೆಸರಲ್ಲಿ ಅರ್ಚನೆಯನ್ನು ಕಾರ್ಯಕರ್ತರು ಮಾಡಿಸಿದ್ದಾರೆ.

ಪೂಜೆ ಬಳಿಕ ಅಷ್ಟ ದಿಕ್ಕುಗಳಲ್ಲೂ ತಡೆ ಹೊಡೆದು ಗ್ರಹಗತಿಗಳಿಗೆ ಶಾಂತಿ ಮಾಡಿಸಲಾಯಿತು.  ಪ್ರಮುಖವಾಗಿ ಹಾಸನದ ಮೂರು ಗ್ರಹಗಳು, ಕನಕಪುರದ ಎರಡು ಗ್ರಹಗಳು, ಮೈಸೂರಿನ ಒಂದು ಗ್ರಹಗಳಿಗೆ ಶಾಂತಿ ಪೂಜೆ ಮಾಡಿಸಲಾಗಿದೆ ಎಂದು ಕಾರ್ಯಕರ್ತರು ಕಾಲೆಳೆದಿದ್ದಾರೆ.

ಮೈತ್ರಿಕೂಟ ನಾಯಕರ ವಿರುದ್ಧ ಗರಂ ಆಗಿರುವ ಕಾರ್ಯಕರ್ತರು, ಆಡಿಯೋ ಪ್ರಕರಣದಿಂದ ಮುಕ್ತವಾಗಿ ಬಿ.ಎಸ್. ಯಡಿಯೂರಪ್ಪ ಶೀಘ್ರ ಮುಖ್ಯಮಂತ್ರಿ ಆಗಲಿ ಎಂದು ಪ್ರಾರ್ಥಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ವೆಲೈಂಟೈನ್ಸ್ ಡೇ; ಪ್ರೇಮಿಗಳಿಗೆ ಶ್ರೀರಾಮ ಸೇನೆ ಖಡಕ್ ಎಚ್ಚರಿಕೆ