Select Your Language

Notifications

webdunia
webdunia
webdunia
webdunia

ಕುರ್ಚಿ ಉಳಿಸಿಕೊಳ್ಳಲು ಆಪರೇಷನ್ ಕಮಲ ಆಡಿಯೋ ರಿಲೀಸ್ ಮಾಡಿದೆ - ಸಿಎಂ ಕುಮಾರಸ್ವಾಮಿ

ಕುರ್ಚಿ ಉಳಿಸಿಕೊಳ್ಳಲು ಆಪರೇಷನ್ ಕಮಲ ಆಡಿಯೋ ರಿಲೀಸ್ ಮಾಡಿದೆ - ಸಿಎಂ ಕುಮಾರಸ್ವಾಮಿ
ಬೆಂಗಳೂರು , ಬುಧವಾರ, 13 ಫೆಬ್ರವರಿ 2019 (08:01 IST)
ಬೆಂಗಳೂರು : ನಾವೇನು ಸನ್ಯಾಸಿಗಳಲ್ಲ. ಕುರ್ಚಿ ಉಳಿಸಿಕೊಳ್ಳಲು ಆಪರೇಷನ್ ಕಮಲದ  ಆಡಿಯೋವನ್ನು ಪತ್ರಿಕಾಗೋಷ್ಠಿ ನಡೆಸಿ ರಿಲೀಸ್ ಮಾಡಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.


ಸದನದಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು, ‘ಸಿಎಂ ಕುಮಾರಸ್ವಾಮಿ ಅವರು ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿ ಸ್ಪೀಕರ್ ಅವರನ್ನು ಬೀದಿಗೆ ತಂದಿದ್ದಾರೆ’ ಎಂದು ಆರೋಪಿಸಿದರು.


ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಅವರು, ‘ಬಿಜೆಪಿ ನಾಯಕರು ಪದೇ ಪದೇ ಆಪರೇಷನ್ ಕಮಲ ನಡೆಯುತ್ತಿಲ್ಲ ಎಂದು ಹೇಳುತ್ತಿದ್ದರು. ಅಲ್ಲದೇ ಸರ್ಕಾರ ಉರುಳಿದರೆ ನಾವೇನು ಸುಮ್ಮನೆ ಕೂರಲು ಸನ್ಯಾಸಿಗಳಲ್ಲ ಎಂದು ಹೇಳುತ್ತಿದ್ದರು. ಹಾಗೆಯೇ ನಾವು ಕೂಡ ಸನ್ಯಾಸಿಗಳು ಅಲ್ಲ. ನಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ನಾವು ಪ್ರತಿಕಾಗೋಷ್ಠಿ ನಡೆಸಿ ಈ ಆಡಿಯೋ ರೆಕಾರ್ಡ್ ಬಿಡುಗಡೆ ಮಾಡಿದ್ದೇವೆ ಅಷ್ಟೇ’ ಎಂದು ಎಚ್‍ಡಿಕೆ ತಿರುಗೇಟು ನೀಡಿದ್ದಾರೆ.


ಹಾಗೇ ‘ಏನೂ ತಪ್ಪು ಮಾಡಿಲ್ಲ ಅಂದರೆ ಬಿಜೆಪಿಯವರಿಗೆ ಭಯ ಏಕೆ ಎಂದು ಪ್ರಶ್ನಿಸಿದ ಸಿಎಂ ಕುಮಾರಸ್ವಾಮಿ ಅವರು, ಸತ್ಯವನ್ನ ಜನರಿಗೆ ತೋರಿಸಬೇಕಿತ್ತಲ್ವಾ? ಅದಕ್ಕೆ ಆಡಿಯೋ ನೀಡಿದೆ. ಸ್ಪೀಕರ್ ಹೆಸರನ್ನು ಬೀದಿಗೆ ತಂದಿದ್ದು ಯಾರು? ಎನ್ನುವುದನ್ನು ಅವರೇ ಯೋಚನೆ ಮಾಡಲಿ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಠ ಮಾಡುತ್ತಿದ್ದ ಶಿಕ್ಷಕ ಸತ್ತದ್ದು ಹೇಗೆ ಗೊತ್ತಾ?