Daily Horoscope

Select Your Language

Notifications

webdunia
webdunia
webdunia
webdunia

ವೆಲೈಂಟೈನ್ಸ್ ಡೇ; ಪ್ರೇಮಿಗಳಿಗೆ ಶ್ರೀರಾಮ ಸೇನೆ ಖಡಕ್ ಎಚ್ಚರಿಕೆ

ಶ್ರೀರಾಮ ಸೇನೆ
ವೆಲೈಂಟೈನ್ಸ್ ಡೇ ಗೆ ಪ್ರೇಮಿಗಳಿಗೆ ಖಡಕ್ ಎಚ್ಚರಿಕೆಯನ್ನು  ಶ್ರೀ ರಾಮ್ ಸೇನೆ ಕೊಟ್ಟಿದೆ.

ವೆಲೈಂಟೈನ್ಸ್ ಡೇ ಅಂಗವಾಗಿ ಅಶ್ಲೀಲವಾಗಿ ಜೋಡಿಗಳು ಕಂಡು ಬಂದಲ್ಲಿ ಪೊಲೀಸರ ವಶಕ್ಕೆ ಒಪ್ಪಿಸಲಾಗುವುದು ಎಂದು ಶ್ರೀರಾಮ ಸೇನೆ ಮುಖಂಡರು ತಿಳಿಸಿದ್ದಾರೆ.

ಪ್ರೇಮಿಗಳ‌ ದಿನದ ಬದಲು ತಂದೆ ತಾಯಿಗಳನ್ನ ಪೂಜಿಸಿ ಎಂದಿರುವ ಮುಖಂಡರು, ಫೆ. 14ರ ಪ್ರೇಮಿಗಳ ದಿನಾಚರಣೆಗೆ ಉಡುಪಿ ಜಿಲ್ಲಾ ಶ್ರೀ ರಾಮಸೇನೆ ವಿರೋಧ ವ್ಯಕ್ತಪಡಿಸಿದೆ. 

ಪ್ರಮೋದ್ ಮುತಾಲಿಕ್ ರ ಸಲಹೆಯಂತೆ  ಪ್ರೇಮಿಗಳ ದಿನಾಚರಣೆ ಬದಲು ತಂದೆ-ತಾಯಿಯವರನ್ನು ಪೂಜಿಸಿ ಎಂದು ಯುವಕ ಯುವತಿಯರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಸೇನೆ ಮುಂದಾಗಿದೆ .

ಈ ದಿನದಂದು ರಸ್ತೆ, ಪಾರ್ಕ್, ಅಥವಾ ಇನ್ಯಾವುದೇ ಸ್ಥಳದಲ್ಲಿ ಅಸಭ್ಯ, ಅಶ್ಲೀಲ,  ಅಸಹ್ಯವಾಗಿ ವರ್ತಿಸುವ ಜೋಡಿಗಳನ್ನ ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಅವರವರ ಹೆತ್ತವರಿಗೆ ಮಾಹಿತಿ ನೀಡುತ್ತೇವೆ ಎಂದು ಉಡುಪಿ ಜಿಲ್ಲಾ ಶ್ರೀ ರಾಮಸೇನೆ ಅಧ್ಯಕ್ಷ ಜಯರಾಮ್ ಅಂಬೆಕಲ್ಲು  ಎಚ್ಚರಿಕೆ ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಗೌಡರ ವಿರುದ್ಧ ಅವಹೇಳನ; ಬಿಜೆಪಿ ಶಾಸಕನ ವಿರುದ್ಧ ಜೆಡಿಎಸ್ ಆಕ್ರೋಶ