Select Your Language

Notifications

webdunia
webdunia
webdunia
webdunia

ರೋಬೋಟಿಕ್ ಯೂರೋ ಸ್ತ್ರೀರೋಗ ಶಾಸ್ತ್ರದ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಬಗ್ಗೆ ಕಾರ್ಯಾಗಾರ

ರೋಬೋಟಿಕ್ ಯೂರೋ ಸ್ತ್ರೀರೋಗ ಶಾಸ್ತ್ರದ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಬಗ್ಗೆ ಕಾರ್ಯಾಗಾರ
bangalore , ಶುಕ್ರವಾರ, 27 ಆಗಸ್ಟ್ 2021 (19:35 IST)
ಬೆಂಗಳೂರು: ರೋಬೋಟಿಕ್ ಯೂರೋ ಸ್ತ್ರೀ ರೋಗ ಶಾಸ್ತ್ರದ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಬಗ್ಗೆ ಫೋರ್ಟಿಸ್ ಆಸ್ಪತ್ರೆಯು ಎರಡು ದಿನಗಳ ಕಾಲ ಕಾರ್ಯಾಗಾರ ನಡೆಸುತ್ತಿದೆ. 
 
ಯೂರೋ ಆಂಕೋಲಜಿ, ಯೂರೋ ಗೈನಕಾಲಜಿ, ಆಂಡ್ರಾಲಜಿ, ಟ್ರಾನ್ಸ್ಪ್ಲಾಂಟ್ ಮತ್ತು ರೋಬೋಟಿಕ್ ಸರ್ಜರಿ ಅನುಭವಿಯಾದ ಡಾ. ಮೋಹನ್ ಕೇಶವ್‌ಮೂರ್ತಿ ಈ ಕಾರ್ಯಾಗಾರವನ್ನು ಆಸ್ಪತ್ರೆಯ ಸಭಾಂಗಣದಲ್ಲಿ ನಡೆಸುತ್ತಿದ್ದಾರೆ. 
 
 ರೋಬೋಟಿಕ್ ಯೂರೋ ಸ್ತ್ರೀರೋಗ ಶಾಸ್ತ್ರದಲ್ಲಿ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳು, ನೂತನ ಶಸ್ತ್ರಚಿಕಿತ್ಸೆ, ರೋಬೋಟಿಕ್ ಚಿಕಿತ್ಸೆ ಸೇರಿದಂತೆ ಇತರೆ ಹೊಸ ಚಿಕಿತ್ಸಾ ವಿಧಾನಗಳ ಬಗ್ಗೆ ಕಾರ್ಯಾಗಾರದಲ್ಲಿ ತಿಳಿಸಿಕೊಡಲಾಗುತ್ತದೆ. ಈ ಕಾರ್ಯಾಗಾರದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಅಭ್ಯಾಸದಲ್ಲಿ ತೊಡಗಿರುವ ವೈದ್ಯರು ಹಾಗೂ ಕಾರ್ಪೋರೇಟ್ ವೈದ್ಯರು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯ, ಶುಚಿತ್ವದಲ್ಲಿ ಉದ್ಯೋಗ ಸೃಷ್ಟಿಸಲು ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ಒಪ್ಪಂದ