ಬಳ್ಳಾರಿ: ಜಿಲ್ಲೆಯ ರಾಣಿತೊಟ್ಟಂ ಪ್ರದೇಶದ ಬಳಿ ಆರ್‌ಜೆ ಹತ್ತಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಮೃತದೇಹ ನಗ್ನ ಸ್ಥಿತಿಯಲ್ಲಿ ಕೆಲ ಗಾಯಗಳೊಂದಿಗೆ ಪತ್ತೆಯಾಗಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಶುರುವಾಗಿದೆ.
ಈ ಸಂಬಂಧ ಮೃತನ ಪತ್ನಿ ನೀಲವೇಣಿ ದೂರು ನೀಡಿದ್ದಾರೆ. ದೂರಿನಲ್ಲಿ ಪತಿಯ ತಲೆ, ಭುಜ ಮತ್ತು ಕಿವಿಯ ಮೇಲೆ ಗಾಯದ ಗುರುತುಗಳೊಂದಿಗೆ ನಗ್ನ ಸ್ಥಿತಿಯಲ್ಲಿ ಮೃತದೇಹಪತ್ತೆಯಾಗಿದೆ.
ತನ್ನ ಪತಿ ಕೆಲವು ದಿನಗಳ ಹಿಂದೆ ಮನೆಯಿಂದ ಹೊರಗೆ ಹೋಗಿದ್ದರು ಮತ್ತು ಹಿಂತಿರುಗಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
"ಅವರ ದೂರಿನ ಆಧಾರದ ಮೇಲೆ, ನಾವು BNS ಸೆಕ್ಷನ್ 103 (ಕೊಲೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ" ಎಂದು ಎಸ್‌ಪಿ ಹೇಳಿದರು. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.