Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಸರ್ಕಾರ ಬದುಕಿದೆಯೋ, ಸತ್ತಿದೆಯೋ: ಸಿಎಂಗೆ ಆರ್‌ ಅಶೋಕ್ ಪ್ರಶ್ನೆ

Karnataka Congress Government

Sampriya

ಬೆಂಗಳೂರು , ಶನಿವಾರ, 5 ಏಪ್ರಿಲ್ 2025 (16:14 IST)
ಬೆಂಗಳೂರು:  2024-25 ರ ಆರ್ಥಿಕ ವರ್ಷ ಮುಗಿದರೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉಪಯೋಜನೆಯ ₹9,219.36 ಕೋಟಿ ರೂಪಾಯಿ ವಿವಿಧ ಇಲಾಖೆಗಳಲ್ಲಿ ಇನ್ನೂ ಬಳಕೆಯಾಗದೆ ಉಳಿದಿದೆಯಲ್ಲ, ನಿಮ್ಮ ಸರ್ಕಾರ ಬದುಕಿದೆಯೋ ಅಥವಾ ಸತ್ತಿದೆಯೋ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಸ್ವಯಂ ಘೋಷಿತ 'ದಲಿತರ ಚಾಂಪಿಯನ್' ಸಿಎಂ ಸಿದ್ದರಾಮಯ್ಯನವರೇ,

ಅಹಿಂದ ಮತಗಳ ಮೇಲೆ ಸವಾರಿ ಮಾಡಿ ಅಧಿಕಾರ ಅನುಭವಿಸುತ್ತಿರುವ ತಾವು ಪರಿಶಿಷ್ಟ ಸಮುದಾಯಗಳಿಗೆ ಈ ಪರಿ ದ್ರೋಹ ಮಾಡುತ್ತಿದ್ದೀರಲ್ಲ, ನಿಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದೆಯೇ?

2024-25 ರ ಆರ್ಥಿಕ ವರ್ಷ ಮುಗಿದರೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉಪಯೋಜನೆಯ ₹9,219.36 ಕೋಟಿ ರೂಪಾಯಿ ವಿವಿಧ ಇಲಾಖೆಗಳಲ್ಲಿ ಇನ್ನೂ ಬಳಕೆಯಾಗದೆ ಉಳಿದಿದೆಯಲ್ಲ, ನಿಮ್ಮ ಸರ್ಕಾರ ಬದುಕಿದೆಯೋ ಅಥವಾ ಸತ್ತಿದೆಯೋ?

ರಾಜಕೀಯ ವೇದಿಕೆಗಳಲ್ಲಿ, ಸದನದಲ್ಲಿ,  ಭಾಷಣಗಳಲ್ಲಿ, ದಲಿತರು, ಹಿಂದುಳಿದವರ ಉದ್ಧಾರದ ಬಗ್ಗೆ ಉದ್ದುದ್ದ ಭಾಷಣ ಬಿಗಿದರೆ ತಳಸಮುದಾಯಗಳ ಕಲ್ಯಾಣ ಆಗುವುದಿಲ್ಲ ಸಿದ್ದರಾಮಯ್ಯನವರೇ. ಅಧಿಕಾರ ಇದ್ದಾಗ ಪ್ರಾಮಾಣಿಕತೆಯಿಂದ ಪರಿಶಿಷ್ಟ ಸಮುದಾಯಗಳ ಏಳ್ಗೆ ಬಗ್ಗೆ ಬದ್ಧ ತೋರದೆ, ಮೊಸಳೆ ಕಣ್ಣೀರು ಸುರಿಸುವ ನಿಮ್ಮ ಬೂಟಾಟಿಕೆ ಈಗ ಬಯಲಾಗಿದೆ. ಕರ್ನಾಟಕ ಪಕ್ಷ ದಲಿತ ವಿರೋಧಿ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನರೇಂದ್ರ ಮೋದಿಗೆ ಶ್ರೀಲಂಕಾದ ಅತ್ಯುನ್ನತ ಗೌರವ: ಭಾರತದ ಪ್ರಧಾನಿಗೆ 22ನೇ ಅಂತರರಾಷ್ಟ್ರೀಯ ಪ್ರಶಸ್ತಿ