Webdunia - Bharat's app for daily news and videos

Install App

ಮಹಿಳೆಯರ ಒಳ ಉಡುಪು ಕದಿಯುವ ವಿಕೃತ ಕಾಮಿ!

Webdunia
ಮಂಗಳವಾರ, 17 ಜುಲೈ 2018 (14:58 IST)
ದಿನಬೆಳಗಾದರೆ ಭಾಗದ ಮಹಿಳೆಯರಿಗೆ ಒಂದೇ ಭಯ. ಯಾವ ಕ್ಷಣದಲ್ಲಾದರೂ ತಮ್ಮ ಒಳ ಉಡುಪುಗಳು ಮಾಯವಾಗಬಹುದು ಎನ್ನುವ ಆತಂಕ. ಮನೆಯ ಹೊರಗೆ ಒಣಗಲು ಹಾಕಿದ ಒಳ ಉಡುಪುಗಳು ಇದ್ದಕ್ಕಿದ್ದಂತೆ ಮಾಯವಾಗುತ್ತಿವೆ. ಮಾತ್ರವಲ್ಲದೇ ಮನೆಯೊಳಗಿನ ಕವಾಟಿನಲ್ಲಿರುವ ಒಳ ಉಡುಪುಗಳು ಕದ್ದೊಯ್ಯುವ ವಿಕೃತ ಕಾಮಿಯೊಬ್ಬ ಊರಿಗೆ ಕಾಲಿಟ್ಟಿದ್ದಾನೆ. ಅಷ್ಟಕ್ಕೂ ಊರು ಯಾವುದು ಅಂತೀರಾ? ಮುಂದೆ ಓದಿ…

ಕಳೆದ ಒಂದುವರೆ ತಿಂಗಳುಗಳಿಂದ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಆರು ಕಡೆಗಳಲ್ಲಿ ಇಂತಹದೊಂದು ಪ್ರಕರಣ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಹಾಡಹಗಲೇ ಕೃತ್ಯ ನಡೆಸುವ ವಿಕೃತಕಾಮಿ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಮನೆಯ ಹೆಂಚು ತೆಗೆದು ಕವಾಟಿನಲ್ಲಿರುವ ಮಹಿಳೆಯಯರ ಒಳ ಉಡುಪುಗಳನ್ನು ಕದ್ದೊಯ್ಯುತ್ತಿದ್ದಾನೆ. ಮುಜುಗರಪಟ್ಟುಕೊಂಡ ಮಹಿಳೆಯರು ಬಗ್ಗೆ ಯಾರ ಬಳಿಯೂ ಹೇಳದಿದ್ದರಿಂದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ

ದಿನೇ ದಿನೇ ವಿಕೃತ ಕಾಮಿಯ ಹಾವಳಿ ಹೆಚ್ಚಾಗಿದ್ದರಿಂದ ಕೊನೆಗೆ ಮಹಿಳೆಯರು ಪಂಚಾಯತ್ ಜನಪ್ರತಿನಿಧಿಗಳಿಗೆ ದೂರು ನೀಡಿದ್ದಾರೆ. ಅಷ್ಟಕ್ಕೂ ಒಳ ಉಡುಪುಗಳನ್ನು ಕದಿಯುತ್ತಿದ್ದ ಸೈಕೋ ಪಾತ್ ಯಾರು ಎನ್ನುವುದು ಇನ್ನೂ ಕೂಡ ನಿಗೂಢವಾಗಿಯೇ ಉಳಿದಿದೆ.

ಪತಿ-ಪತ್ನಿ ಕೆಲಸಕ್ಕೆ ಹೋಗಿ, ಮಕ್ಕಳು ಶಾಲಾ ಕಾಲೇಜುಗಳಿಗೆ ಹೋದರೆ ಮನೆಯಲ್ಲಿ ಹಗಲಿನ ವೇಳೆಯಲ್ಲಿ ಯಾರೂ ಇರುವುದಿಲ್ಲ. ಹೀಗಾಗಿ ವಿಭಕ್ತ ಕುಟುಂಬವಿರುವ ಮನೆಗೆ ಸುಮಾರು ಮಧ್ಯಾಹ್ನದ ವೇಳೆಗೆ ನುಗ್ಗುವ ಈತ ಮನೆಯ ಕವಾಟಿನಲ್ಲಿರುವ ವಸ್ತೃಗಳನ್ನು ಚೆಲ್ಲಾಪಿಲ್ಲಿಯಾಗಿಸಿ ಬಳಿಕ ಅಲ್ಲಿಂದ ಕಾಲ್ಕೀಳುತ್ತಾನೆ. ಅಲ್ಲದೇ ಒಗೆಯಲು ಹಾಕಿದ ಒಳುಡುಪುಗಳನ್ನು ಕದ್ದೊಯ್ಯುವ ಈತನ ಆಟಾಟೋಪದಿಂದ ಜನರು ಆತಂಕಕ್ಕೀಡಾಗಿದ್ದಾರೆ.

ಮಧ್ಯಾಹ್ನ 11 ರಿಂದ 2 ಗಂಟೆಯೊಳಗೆ ಕಳವು ಪ್ರಕರಣ ನಡೆಯುತ್ತಿದ್ದು, ಗ್ರಾಮಸ್ಥರು ಪಂಚಾಯತ್ ಹಾಗೂ ಕೊಲ್ಲೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಂದೂಗಳಿಗೆ ಯಾತಕ್ಕೋಸ್ಕರ ಅಪಮಾನ ಮಾಡುತ್ತಿದ್ದೀರಿ ಸಿದ್ದರಾಮಯ್ಯನೋರೇ: ವಿಜಯೇಂದ್ರ

DK Shivakumar: ಕೇಂದ್ರ ಚಿನ್ನದ ಬೆಲೆ ಏರಿಕೆ ಮಾಡಿ ಮಹಿಳೆಯರು ಮಾಂಗಲ್ಯ ಕಟ್ಟಿಕೊಳ್ಳಲಾಗದ ಪರಿಸ್ಥಿತಿಯಾಗಿದೆ: ಡಿಕೆ ಶಿವಕುಮಾರ್

ಸಿಎಂ ಕುರ್ಚಿ ಗುದ್ದಾಟದ ನಡುವೆಯೂ ಗುಟ್ಟಾಗಿ ಮಾತುಕತೆ ನಡೆಸಿದ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌

ಸಿಂಹದ ಹಾಗೇ ನಾಯಿಗಳನ್ನು ಸಾಕಿಕೊಂಡಿರುವ ಶ್ವಾನಪ್ರೇಮಿ ಸತೀಶ್‌ಗೆ ಇಡಿ ಶಾಕ್‌, ತನಿಖೆಯಲ್ಲಿ ಗೊತ್ತಾಯ್ತು ಅಸಲಿಯತ್ತು

Karnataka: ಪೋಷಕರ ಸಂದರ್ಶನ ಮಾಡುವಂತಿಲ್ಲ, ಹೆಚ್ಚು ಫೀಸ್ ಕೇಳೋ ಹಾಗಿಲ್ಲ: ಖಾಸಗಿ ಶಾಲೆಗಳಿಗೆ ಹೊಸ ರೂಲ್ಸ್ ಇಲ್ಲಿದೆ

ಮುಂದಿನ ಸುದ್ದಿ