Webdunia - Bharat's app for daily news and videos

Install App

ವುಮೆನ್ಸ್ ಡೇ ಸ್ಪೇಷಲ್ : ಮಹಿಳಾ ಮ್ಯಾರಾಥಾನ್‍

Webdunia
ಗುರುವಾರ, 5 ಮಾರ್ಚ್ 2020 (20:27 IST)
ಮಹಿಳಾ ದಿನಾಚರಣೆ ಅಂಗವಾಗಿ  ಮಹಿಳಾ ಮ್ಯಾರಾಥಾನ್‍ ನಡೆದು ಗಮನ ಸೆಳೆಯಿತು.

ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಲಬುರಗಿ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ ಹಾಗೂ ಪತಂಜಲಿ ಯೋಗ ಸಮಿತಿ ಕಲಬುರಗಿ  ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ಮ್ಯಾರಾಥಾನ್‍ಗೆ ಜಗತ್ ವೃತ್ತದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.

ಮಹಿಳಾ ಪತಂಜಲಿ ಯೋಗ ಸಮಿತಿಯಿಂದ ಸೂರ್ಯ ನಮಸ್ಕಾರದೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಈ ಮ್ಯಾರಾಥಾನ್ ಕಲಬುರಗಿ ನಗರದ ಜಗತ್ ವೃತ್ತದಿಂದ ಆರಂಭವಾಗಿ ಕಲಬುರಗಿ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ (ತಿಮ್ಮಾಪುರಿ ಸರ್ಕಲ್) ಆಗಮಿಸಿ ಕೊನೆಗೊಂಡಿತು.

 ಕಲಬುರಗಿ ಕ್ಷೇತ್ರ ಪ್ರಚಾರ ಅಧಿಕಾರಿ ಶೃತಿ ಎಸ್.ಟಿ., ಮಹಿಳಾ ಪತಾಂಜಲಿ ಯೋಗ ಸಮಿತಿಯ ಅಧ್ಯಕ್ಷೆ ಸುಮಂಗಲಾ ಚಕ್ರವರ್ತಿ, ಕಾವೇರಿ ಜಾವಡೆಕರ್, ಇಂದಿರಾ ರಾಠೋಡ, ರೋಟರಿ ಇನ್ನರ್ ವ್ಹಿಲ್ ಕ್ಲಬ್ ಅಧ್ಯಕ್ಷೆ ಮೋಹನಿ ಜಾವಡೆಕರ್, ವನಿತಾ ವಿಕಾಸ ಮಂಡಳಿಯ ಅಮೂರ್ತ ದೇಶಪಾಂಡೆ, ಸನ್ಮತಿ ಮಹಿಳಾ ಮಂಡಳಿಯ ಪುನಮ್, ಜೆ.ಎನ್.ಜಿ. ಸಂಜನಿ ಮಹಿಳಾ ಮಂಡಳಿಯ ನಮೀತಾ, ಲಾಯನ್ಸ್ ಕ್ಲಬ್‍ನ ಅರುಣಾದೇವಿ ಆವಂಟಿ, ಸಂಗಮೇಶ್ವರ ಮಹಿಳಾ ಮಂಡಳಿಯ ಶೋಭಾ ರಂಜೋಳಕರ್ ಸೇರಿದಂತೆ ಕಲಬುರಗಿ ನಗರದ ಮಹಿಳೆಯರು ಹಾಗೂ ಕಸ್ತೂರಿಬಾಯಿ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments