Publish Date: Thu, 16 Jan 2020 (17:00 IST)
Updated Date: Thu, 16 Jan 2020 (17:09 IST)
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನಜಾಗೃತಿ ಮೂಡಿಸೋಕೆ ಬರ್ತಿರೋ ಕೇಂದ್ರ ಸಚಿವ ಅಮಿತ್ ಶಾ ಗಾಗಿ ಇಲ್ಲಿ ಕೊಡಲಿ ಪೆಟ್ಟು ಬೀಳುತ್ತಿವೆ.
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಡೆಯಲಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಜನಜಾಗೃತಿ ಸಮಾವೇಶಕ್ಕೆ ಹತ್ತಾರು ಮರಗಳನ್ನ ಕಡಿದು ಹಾಕಿರುವ ಘಟನೆ ನಡೆದಿದೆ. ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ.
ಈ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ಹೀಗಾಗಿ ಭದ್ರತಾ ದೃಷ್ಟಿಯಿಂದ ಹತ್ತಾರು ಮರಗಳ ಟೊಂಗೆ ಕಡಿಯಬೇಕಾಗಿತ್ತು. ಆದರೆ ಪಾಲಿಕೆ ಸಿಬ್ಬಂದಿ ಕೆಲವು ಕಡೆ ಮರಗಳನ್ನ ಕಡಿದು ಹಾಕಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಮಿತ್ ಶಾ ಬರುವಿಕೆಗಾಗಿ ಮರಗಳು ಕೊಡಲಿ ಪೆಟ್ಟು ತಿನ್ನುವಂತಾಗಿದೆ ಅಂತ ಪರಿಸರ ಪ್ರೇಮಿಗಳು ಗರಂ ಆಗಿದ್ದಾರೆ.