Select Your Language

Notifications

webdunia
webdunia
webdunia
webdunia

ಸುಜಾತ ಭಟ್ ಕೇಸ್ ಗೆ ಎಂಟ್ರಿ ಕೊಟ್ಟ ಮಹಿಳಾ ಆಯೋಗ

Sujatha Bhat

Krishnaveni K

ಬೆಳ್ತಂಗಡಿ , ಶುಕ್ರವಾರ, 29 ಆಗಸ್ಟ್ 2025 (14:31 IST)
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗಳು ಕಾಣೆಯಾಗಿದ್ದಳೆಂದು ಕತೆ ಕಟ್ಟಿದ್ದ ಸುಜಾತ ಭಟ್ ನೆರವಿಗೆ ಈಗ ಮಹಿಳಾ ಆಯೋಗ ಮುಂದೆ ಬಂದಿದೆ.

ಧರ್ಮಸ್ಥಳಕ್ಕೆ ಸ್ನೇಹಿತರ ಜೊತೆ ಬಂದಿದ್ದ ನನ್ನ ಮಗಳು ಅನನ್ಯಾ ಭಟ್ ಕಾಣೆಯಾಗಿದ್ದಳು ಎಂದು ಸುಜಾತ ಭಟ್ ದೂರು ನೀಡಿದ್ದರು. ಆದರೆ ಈಗ ಎಸ್ಐಟಿ ತನಿಖೆ ವೇಳೆ ಸುಜಾತ ಭಟ್ ತಾನು ಇದುವರೆಗೆ ಹೇಳಿದ್ದೆಲ್ಲವೂ ಸುಳ್ಳು, ಅನನ್ಯ ಭಟ್ ಎನ್ನುವ ಮಗಳಿಲ್ಲ ಎಂದು ಸತ್ಯ ಒಪ್ಪಿಕೊಂಡಿದ್ದರು.

ಇದಾದ ಬಳಿಕ ಸುಜಾತ ಭಟ್ ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಮಾಧ್ಯಮಗಳೂ ಅವರನ್ನು ಪದೇ ಪದೇ ಈ ಬಗ್ಗೆ ಪ್ರಶ್ನೆ ಕೇಳುತ್ತಿರುವುದು ಅವರನ್ನು ರೊಚ್ಚಿಗೆಬ್ಬಿಸಿದೆ.

ಈ ಹಿನ್ನಲೆಯಲ್ಲಿ ಮಹಿಳಾ ಆಯೋಗ ಪೊಲೀಸರಿಗೆ ಪತ್ರ ಬರೆದು ಆಕೆಗೆ ಭದ್ರತೆ ಒದಗಿಸುವಂತೆ ಮನವಿ ಮಾಡಿದೆ. ಸುಜಾತ ಭಟ್ ಗೆ ಮಾನಸಿಕ ಕಿರುಕುಳವಾಗುತ್ತಿದೆ. ಮಹಿಳೆ ನಿರ್ಭೀತಿಯಿಂದ ಹೇಳಲು ಅವಕಾಶ ಕೊಡಬೇಕು. ಹೀಗಾಗಿ ಆಕೆಗೆ ಸೂಕ್ತ ಭದ್ರತೆ ಒದಗಿಸಿ ಎಂದು ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಿಮರೋಡಿ ವಶ ಪಡೆಯುವ ವೇಳೆ ಪೊಲೀಸರಿಗೆ ಅಡ್ಡಿ: ಮೂವರಿಗೆ ಬಿಗ್‌ ರಿಲೀಫ್‌