ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದಲ್ಲಿ ಸತತ 11 ಗಂಟೆ ಎಸ್ಐಟಿ ವಿಚಾರಣೆ ನಡೆಸಿದಾಗ ಕಕ್ಕಾಬಿಕ್ಕಿಯಾದ ಸುಜಾತ ಭಟ್ ಸತ್ಯ ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಧರ್ಮಸ್ಥಳಕ್ಕೆ ಸ್ನೇಹಿತರ ಜೊತೆ ಬಂದಿದ್ದ ನನ್ನ ಮಗಳು ಅನನ್ಯಾ ಭಟ್ ನಾಪತ್ತೆಯಾಗಿದ್ದಳು. ಅವಳು ಕೊಲೆಯಾಗಿರಬಹುದು. ಆಕೆಯ ಅಸ್ತಿಪಂಜರವನ್ನಾದರೂ ಕೊಡಿ ಎಂದೆಲ್ಲಾ ಕಣ್ಣೀರು ಹಾಕಿ ಡ್ರಾಮಾ ಮಾಡಿದ್ದ ಸುಜಾತ ಭಟ್ ನಾಟಕ ಈಗ ಬಯಲಾಗಿದೆ.
ಎಸ್ಐಟಿ ಮುಂದೆ ಮೊನ್ನೆ ಬೆಳ್ಳಂ ಬೆಳಿಗ್ಗೆ ಸುಜಾತ ಭಟ್ ವಿಚಾರಣೆಗೆ ಹಾಜರಾಗಿದ್ದರು. ಸತತ 11 ಗಂಟೆ ಕಾಲ ಅನನ್ಯಾ ಭಟ್ ಪ್ರಕರಣದ ಬಗ್ಗೆ ಎಸ್ಐಟಿ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿ ವಿಚಾರಣೆ ನಡೆಸಿದೆ. ಮಗಳ ಬಗ್ಗೆ ದಾಖಲೆ ನೀಡಲಾಗದೇ ಸುಜಾತ ಭಟ್ ಕಂಗಾಲಾಗಿದ್ದಾರೆ.
ಕೊನೆಗೆ ಸುಜಾತ ಭಟ್ ಎಸ್ಐಟಿ ಮುಂದೆ ಸತ್ಯ ಬಾಯ್ಬಿಟ್ಟಿದ್ದಾಳೆ. ಬುರುಡೆ ಗ್ಯಾಂಗ್ ಹೇಳಿದ್ದಕ್ಕೇ ಮಗಳ ಕತೆ ಕಟ್ಟಿರುವುದಾಗಿ ಹೇಳಿದ್ದಾಳೆ ಎಂದು ತಿಳಿದುಬಂದಿದೆ. ನನಗೆ ಆಸ್ತಿ ಬೇಕಿತ್ತು. ಅದಕ್ಕೆ ಬುರುಡೆ ಗ್ಯಾಂಗ್ ಹೇಳಿದಂತೆ ಮಗಳ ಕತೆ ಕಟ್ಟಿ ಹೇಳಿದ್ದೆ. ನನಗೇನೂ ಗೊತ್ತಿಲ್ಲ, ದಯವಿಟ್ಟು ಬಿಟ್ಟು ಬಿಡಿ, ಬೇಕಿದ್ದರೆ ಕೇಸ್ ವಾಪಸ್ ತೆಗೆದುಕೊಳ್ಳುತ್ತೇನೆ ಎಂದು ಗೋಗೆರೆದಿದ್ದಾಳೆ ಎಂದು ತಿಳಿದುಬಂದಿದೆ. ಇದರೊಂದಿಗೆ ಬುರುಡೆ ಗ್ಯಾಂಗ್ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ.