ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಗ್ಯಾಂಗ್ ಅಣತಿ ಮೇರೆಗೆ ಅನನ್ಯ ಭಟ್ ನನ್ನ ಮಗಳು, ನಾಪತ್ತೆಯಾಗಿದ್ದಾಳೆ ಎಂದು ಕತೆ ಕಟ್ಟಿದ್ದ ಸುಜಾತ ಭಟ್ ನಿಜಾಂಶ ಈಗ ಬಯಲಾಗಿದೆ. ಸತ್ಯ ಬಯಲಾದ ಮೇಲೆ ಸುಜಾತ ಭಟ್ ಗೆ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ನೋ ಎಂಟ್ರಿಯಾಗಿದೆ.
ಧರ್ಮಸ್ಥಳದ ವಿರುದ್ಧ ಪಿತೂರಿ ನಡೆಸಲು ಬುರುಡೆ ಗ್ಯಾಂಗ್ ಸುಜಾತ ಭಟ್ ರನ್ನು ಬಳಸಿಕೊಂಡಿತ್ತು. ಸುಜಾತ ಭಟ್ ಗೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿಯೇ ಆಶ್ರಯವೂ ಸಿಕ್ಕಿತ್ತು ಎನ್ನಲಾಗಿದೆ. ಆದರೆ ಈಗ ಸುಜಾತ ಭಟ್ ಕತೆ ಬಯಲಾಗಿದೆ.
ಹೀಗಾಗಿ ಮಹೇಶ್ ಶೆಟ್ಟಿ ಆಂಡ್ ಗ್ಯಾಂಗ್ ಗೂ ಇದು ಹಿನ್ನಡೆಯಾಗಿದೆ. ಧರ್ಮಸ್ಥಳ ವಿರುದ್ಧ ಬುರುಡೆ ಗ್ಯಾಂಗ್ ನಡೆಸಿದ್ದೆಲ್ಲವೂ ಸುಳ್ಳು ಆರೋಪ ಎನ್ನುವಂತಾಗಿದೆ. ಹೀಗಾಗಿ ಈಗ ಸುಜಾತ ಭಟ್ ರಿಂದ ಈ ಗ್ಯಾಂಗ್ ಅಂತರ ಕಾಯ್ದುಕೊಂಡಿದೆ.
ಇದೀಗ ಸುಜಾತ ಭಟ್ ಗೆ ತಿಮರೋಡಿ ಮನೆಗೆ ಪ್ರವೇಶವಿಲ್ಲ. ಹೀಗಾಗಿ ಎಸ್ಐಟಿ ತನಿಖೆಗಾಗಿ ಅವರು ತಮ್ಮ ವಾಸ್ತವ್ಯದ ವ್ಯವಸ್ಥೆಯನ್ನು ತಾವೇ ಮಾಡಿಕೊಂಡಿದ್ದಾರೆ. ಅಲ್ಲಿಂದಲೇ ಎಸ್ಐಟಿ ತನಿಖೆಗೆ ಬಂದು ಹೋಗುತ್ತಿದ್ದಾರೆ.