Select Your Language

Notifications

webdunia
webdunia
webdunia
webdunia

ಅನುಮಾನಾಸ್ಪದ ರೀತಿಯಲ್ಲಿ ಮಹಿಳೆ ಸಾವು

ಅನುಮಾನಾಸ್ಪದ ರೀತಿಯಲ್ಲಿ ಮಹಿಳೆ ಸಾವು
bangalore , ಭಾನುವಾರ, 23 ಅಕ್ಟೋಬರ್ 2022 (17:44 IST)
ಬೆಂಗಳೂರಿನ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ನಿಹಾರಿಕಾ ಮೃತ ಪಟ್ಟ ಮಹಿಳೆಯಾಗಿದ್ದಾಳೆ. ಈಕೆಯದ್ದು ಸಹಜ ಸಾವಲ್ಲ, ಆಕೆಯ ಪತಿ ಈಕೆಯನ್ನು ಕೊಲೆ ಮಾಡಿದ್ದಾನೆ ಎಂದು ನಿಹಾರಿಕಾಳ ಪೋಷಕರು ಆರೋಪ ಮಾಡ್ತಿದ್ದಾರೆ. ನಿಹಾರಿಕಾಳ ಪತಿ ಕಾರ್ತಿಕ ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ. 4 ತಿಂಗಳ ಹಿಂದೆ ನಿಹಾರಿಕ ಕಾರ್ತಿಕನನ್ನು ಪ್ರೀತಿಸಿ ವಿವಾಹವಾಗಿದ್ದಳು. ಆದರೆ ಈಕೆಗೆ ಪ್ರತಿನಿತ್ಯವು ಸತತವಾಗಿ ಗಂಡ ಕಿರುಕುಳ ನೀಡುತ್ತಿದ್ದ ಎಂಬ ಕಾರಣಕ್ಕೆ, ಅಕ್ಕನ ಮನೆ ಸೇರಿದ್ದಳು. ಕಳೆದ 2 ದಿನಗಳ ಹಿಂದೆ ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಹೇಳಿ ಕಾರ್ತಿಕ್ ಮನೆಗೆ ಕರದುಕೊಂಡು ಬಂದಿದ್ದ.  ಇನ್ನು ನಿಹಾರಿಕ  ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದು, ಶಾಲೆಯ ಕಾರ್ಯಕ್ರಮಕ್ಕೆ ತೆರಳುವ ವಿಚಾರವಾಗಿ ನಿಹಾರಿಕಗೆ ಕಾರ್ತಿಕ ನಿಂದಿಸಿದನು. ಈ ವೇಳೆ ಕಾರ್ತಿಕ ಹಾಗೂ ನಿಹಾರಿಕ ನಡುವೆ ಮಾತಿಗೆ ಮಾತು ಬೆಳೆದು ಕೊಲೆ ಮಾಡಿದ್ದಾನೆ ಎಂದು ನಿಹಾರಿಕಾ ಪೋಷಕರು ಆರೋಪಿಸಿದ್ದಾರೆ. ಸದ್ಯ ಪುಟ್ಟೇನಹಳ್ಳಿ ಠಾಣೆಯ ಪೊಲೀಸರು ಕಾರ್ತಿಕನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದು, ಸಾವಿಗೆ ಕಾರಣವೇನು ಎಂಬುವುದು ವಿಚಾರಣೆಯ ನಂತರ ತಿಳಿದು ಬರಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಸನಾಂಬೆ ದರ್ಶನಕ್ಕೆ ಜನ ಸಾಗರ