Select Your Language

Notifications

webdunia
webdunia
webdunia
webdunia

ಹಾಸನಾಂಬೆ ದರ್ಶನಕ್ಕೆ ಜನ ಸಾಗರ

ಹಾಸನಾಂಬೆ ದರ್ಶನಕ್ಕೆ ಜನ ಸಾಗರ
ಹಾಸನ , ಭಾನುವಾರ, 23 ಅಕ್ಟೋಬರ್ 2022 (17:30 IST)
ಹಾಸನಾಂಬೆ ಸಾರ್ವಜನಿಕ ದರ್ಶನೋತ್ಸವದ ಹತ್ತನೇ ದಿನವಾದ ಇಂದು ದೇವಾಲಯಕ್ಕೆ ಭಕ್ತ ಸಾಗರವು ಹರಿದು ಬರುತ್ತಿದೆ. ಮುಂಜಾನೆ 5 ಗಂಟೆಗೇ ಸರತಿ ಸಾಲುಗಳಲ್ಲಿ ಜನರು ತುಂಬಿ ತುಳುಕ್ಕುತ್ತಿದ್ದು, VIP, VIPI, ಸಾಮಾನ್ಯ, ವಿಶೇಷ ಪಾಸ್ ಎಲ್ಲೆಡೆ ಭರ್ತಿಯಾಗಿವೆ. ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಹಾಸನಾಂಬೆ ದರ್ಶನಕ್ಕೆ ಭಕ್ತರ ದಂಡು ಬರುತ್ತಿದ್ದು, ಇಂದು ಭಾನುವಾರವಾದ ಕಾರಣ ಅಪಾರ ಸಂಖ್ಯೆಯಲ್ಲಿ ಹಾಸನಾಂಬೆಯ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ನೆನ್ನೆ ತಡ ರಾತ್ರಿವರೆಗೂ ಭಾರೀ ಸಂಖ್ಯೆಯಲ್ಲಿ ಕಿಕ್ಕಿರಿದು ಭಕ್ತಾದಿಗಳು ತುಂಬಿದ್ದರು, ಇಂದೂ ಸಹ ಭಾರಿ ಪ್ರಮಾಣದಲ್ಲಿ ಜನಸಂಖ್ಯೆ ಹರಿದು ಬರುತ್ತಿರುವುದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ 2 ದಿನ ಮಳೆ ಮುನ್ಸೂಚನೆ