Publish Date: Sun, 23 Oct 2022 (16:40 IST)
Updated Date: Sun, 23 Oct 2022 (16:43 IST)
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ರಾಯಚೂರು ಜಿಲ್ಲೆಯ ಗಡಿ ಶಕ್ತಿ ನಗರದ ಬಳಿ ಕೃಷ್ಣಾನದಿ ಸೇತುವೆಯನ್ನು ದಾಟಿದ್ದು, ತೆಲಂಗಾಣ ರಾಜ್ಯವನ್ನು ಪ್ರವೇಶಿಸಿದೆ. ಯರಮರಸ್ನಲ್ಲಿ ವಾಸ್ತವ್ಯ ಹೂಡಿದ್ದ ಪಾದಯಾತ್ರಿಗಳು ಐದನೇ ರಾಜ್ಯದತ್ತ ತೆರಳಿದ್ರು. KPCC ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, KPCC ಪ್ರಚಾರ ಸಮಿತಿ ಅಧ್ಯಕ್ಷ M.B ಪಾಟೀಲ್ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ರು. ಸೇತುವೆ ಬಳಿ ತೆಲಂಗಾಣ ರಾಜ್ಯ ಕಾಂಗ್ರೆಸ್ ರಾಹುಲ್ ಗಾಂಧಿಯನ್ನು ಸ್ವಾಗತ ಮಾಡಿದ್ರು. ತೆಲಂಗಾಣದಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮುಂದುವರೆಯಲಿದೆ.