Select Your Language

Notifications

webdunia
webdunia
webdunia
webdunia

ಬಿಎಂಟಿಸಿ ಬಸ್ ಹರಿದು ಗಾಯಗೊಂಡಿದ್ದ ಶಿಲ್ಪಾ ಸಾವು..!

ಬಿಎಂಟಿಸಿ ಬಸ್ ಹರಿದು ಗಾಯಗೊಂಡಿದ್ದ ಶಿಲ್ಪಾ ಸಾವು..!
bangalore , ಭಾನುವಾರ, 23 ಅಕ್ಟೋಬರ್ 2022 (13:55 IST)
ಬಿಎಂಟಿಸಿ ಬಸ್ ಹರಿದು ಶಿಲ್ಪ ಸಾವನಾಪ್ಪಿದ್ದು,ಸಾರಿಗೆ ಸಚಿವ ಶ್ರೀರಾಮುಲು ವಿರುದ್ಧ ವ್ಯಾಪಕ ಆಕ್ರೋಶ ಕೇಳಿಬರುತ್ತಿದೆ.
 
ಕಳೆದ ಅಕ್ಟೋಬರ್‌ 10ರಂದು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಬಿಎಂಟಿಸಿ ಬಸ್ ಹರಿದು ಶಿಲ್ಪಾ ಎಂಬ ವಿದ್ಯಾರ್ಥಿನಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಶಿಲ್ಪಾ ಇಂದು ಮುಂಜಾನೆ 4:30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಹೀಗಾಗಿ ಸಾರಿಗೆ ಸಚಿವ ಶ್ರೀರಾಮುಲು ರಾಜೀನಾಮೆಗೆ ಜನಸಾಮಾನ್ಯರಿಂದ ಆಗ್ರಹ ಹೆಚ್ಚಾಗಿದೆ.ಸಾರಿಗೆ ಇಲಾಖೆ ನಿರ್ಲಕ್ಷ್ಯಕ್ಕೆ ಸರಣಿ ಸಾವು ಸಂಭವಿಸಿದ್ದು, ಮೊನ್ನೆ ಉಮಾದೇವಿ ಇಂದು ಶಿಲ್ಪಾ ಬಲಿಯಾಗಿದ್ದಾರೆ. BMTC ಬಸ್​ ಹರಿದು ಗಾಯಗೊಂಡಿದ್ದ ಶಿಲ್ಪಾ ಕೊನೆಯುಸಿರೆಳೆದಿದ್ದಾರೆ.ಹೀಗಾಗಿ,  ಸಾರಿಗೆ ಸಚಿವ ಶ್ರೀರಾಮುಲು ವಿರುದ್ಧ ಭಾರೀ ಆಕ್ರೋಶ ಕೇಳಿಬರುತ್ತಿದ್ದು, ಶ್ರೀರಾಮುಲು ರಾಜೀನಾಮೆಗೆ ಆಗ್ರಹ ಹೆಚ್ಚಾಗಿದೆ.
 
ಸಾರಿಗೆ ಇಲಾಖೆಯ ನಿರ್ಲಕ್ಷ್ಯದಿಂದ ಮತ್ತೊಂದು ಅವಘಡ ಸಂಭವಿಸಿದೆ. ಬಸ್ಸಿನಿಂದ ಅರಳುವ ಪ್ರತಿಭೆ ಮುದುಡಿ ಹೋಯಿತು,BMTC ಹರಿದಿದ್ದ ಬೆಂಗಳೂರು ವಿವಿ ವಿದ್ಯಾರ್ಥಿ ಶಿಲ್ಪಾ ಸಾವನಪ್ಪಿದ್ದಾರೆ. ನೈತಿಕ ಹೊಣೆ ಹೊತ್ತು ಸಚಿವಗಿರಿಗೆ ರಾಜೀನಾಮೆ ಕೊಡಿ .ನಿಮ್ಮ ಅಧಿಕಾರಿಗಳು ಸುಂಕ ವಸೂಲಿಯಲ್ಲಿ ಬ್ಯುಸಿ ಇದ್ದಾರೆ.ಸಾರಿಗೆ ಇಲಾಖೆಯಲ್ಲಿ ಹೇಳೋರಿಲ್ಲ ಕೇಳೋರಿಲ್ಲದಂತಾಗಿದೆ.ಪ್ರತಿದಿನ ರಸ್ತೆಯಲ್ಲಿ ಜನಸಾಮಾನ್ಯರು ಸಾಯುತ್ತಿದ್ದಾರೆ. ನೀವು ಸಚಿವರಾಗಿರುವುದು ಜನರ ಪ್ರಾಣ ಉಳಿಸಲಿಕ್ಕೆ, ಸಾಲು ಸಾಲು ಸಾವುಗಳಾಗುತ್ತಿದ್ದರು ನಿಮ್ಮ ಮೌನ ಸರಿಯೇ?ರಾಜೀನಾಮೆ ಕೊಟ್ಟು ನಡೀರಿ ಎಂದು ಜನಸಾಮಾನ್ಯರು ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ಶಾಲೆ ದೇಣಿಗೆ ಆದೇಶ ವಾಪಸ್