Publish Date: Fri, 22 Feb 2019 (18:02 IST)
Updated Date: Fri, 22 Feb 2019 (18:04 IST)
ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಹೆರಿಗೆಯಾದ ಘಟನೆ ನಡೆದಿದೆ. ಅಂಬ್ಯುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಮಹಿಳೆಯೊಬ್ಬರು ಜನ್ಮನೀಡಿದ್ದಾರೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಬರದ್ವಾಡ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬರದ್ವಾಡ್ ಗ್ರಾಮದಿಂದ ಕುಂದಗೋಳ ತಾಲೂಕು ಆಸ್ಪತ್ರೆಗೆ ಸಾಗಿಸುವ ವೇಳೆ ಹೆರಿಗೆಯಾಗಿದೆ. ಬರದ್ವಾಡ ಗ್ರಾಮದ ನಿವಾಸಿ ಮಮತಾಜ್ ಚವರಗುಡ್ಡ ಮಗುವಿಗೆ ಜನ್ಮ ನೀಡಿದ ಮಹಿಳೆಯಾಗಿದ್ದಾರೆ.
ಬೆಳಗಿನ ಜಾವ ಮಹಿಳೆಗೆ ಹೆರಿಗೆ ನೋವು ಕಾಣಿಸಿದ ಹಿನ್ನೆಲೆ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ತುರ್ತು ಚಿಕಿತ್ಸಕ ಶಶಿಕುಮಾರ ಮದಲಾರ ಹಾಗೂ ಚಾಲಕ ಶಿವನಗೌಡ ಅವರು ಸಹಾಯದಿಂದ ಸಹಜ ಹೆರಿಗೆಯಾಗಿದೆ.
ಅಂಬ್ಯುಲೆನ್ಸ್ ಸಿಬ್ಬಂದಿಗೆ ಮಹಿಳೆಯ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.