Select Your Language

Notifications

webdunia
webdunia
webdunia
webdunia

ಇದೊಂದು ಬಾರಿ ನನ್ನನ್ನು ಗೆಲ್ಲಿಸಿ : ಶ್ರೀರಾಮುಲು

webdunia
ಚಿತ್ರದುರ್ಗ , ಶುಕ್ರವಾರ, 19 ಆಗಸ್ಟ್ 2022 (11:58 IST)
ಚಿತ್ರದುರ್ಗ : ಚುನಾವಣೆಗೂ ಮುನ್ನವೇ ಸಚಿವ ಶ್ರೀರಾಮುಲುಗೆ ಢವಢವ ಶುರುವಾಗಿದ್ದು, ಇದೊಂದು ಬಾರಿ ನನ್ನನ್ನು ಗೆಲ್ಲಿಸಿ ಎಂದು ಮೊಳಕಾಲ್ಮೂರಿನ ಮತದಾರರಲ್ಲಿ ವಿನಮ್ರ ಮನವಿ ಮಾಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೋನಾಪುರ ಗ್ರಾಮದಲ್ಲಿ ಉನ್ನತಿಕರಿಸಿದ ಪ್ರೌಢಶಾಲೆಯನ್ನು ಉದ್ಘಾಟಿಸಿದ ಬಳಿಕ ವೇದಿಕೆ ಮೇಲೆ ಮಾತನಾಡಿದ ಅವರು, ಕೋನಾಪುರ ಗ್ರಾಮಸ್ಥರ ಹಲವು ವರ್ಷಗಳ ಕನಸು ಈಡೇರಿಸಿದ ಸಂತೃಪ್ತಿ ನನಗಿದೆ.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಉನ್ನತೀಕರಿಸಿದ ಶಾಲೆಗೆ ಪೈಪೋಟಿ ಏರ್ಪಟ್ಟರೂ ಸಹ ಸರ್ಕಾರದ ಹಂತದಲ್ಲಿ ಶ್ರಮಿಸಿ ಈ ಗ್ರಾಮಕ್ಕೆ ಶಾಲೆ ತರಲು ಬಹಳಷ್ಟು ಶ್ರಮ ಪಟ್ಟಿದ್ದೇನೆ ಎಂದರು.  

ಮುಂಬರುವ ವಿಧಾನಸಭಾ ಚುನಾವಣೆಗೆ ಮೊಳಕಾಲ್ಮೂರು ಕ್ಷೇತ್ರದಿಂದ ನಾನು ಸ್ಪರ್ಧಿಸಲಿದ್ದೇನೆ. ಆದ್ದರಿಂದ ತಾವುಗಳು ಇನ್ನೊಂದು ಸಲ ಅವಕಾಶ ಮಾಡಿಕೊಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಲ್ ಫ್ರೆಂಡ್ ಭೇಟಿಯಾಗಲು ಬುರ್ಕಾ ಧರಿಸುತ್ತಿದ್ದ ಪ್ರಿಯಕರ!?