Select Your Language

Notifications

webdunia
webdunia
webdunia
webdunia

ಅವಕಾಶ ಸಿಕ್ರೆ ಮತ್ತೆ ಸಿದ್ದರಾಮಯ್ಯ ಸಿಎಂ ಆಗಲಿ- ಶ್ರೀರಾಮುಲು

Let Siddaramaiah become CM again if given the chance
bangalore , ಮಂಗಳವಾರ, 16 ಆಗಸ್ಟ್ 2022 (21:03 IST)
ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುವ ವ್ಯಕ್ತಿಗಳಲ್ಲಿ ನಾನೂ ಒಬ್ಬ. ಹಿಂದುಳಿದ ಸಮುದಾಯ ಎಂಬುದು ಬಂದಾಗ ನಾನು, ಸಿದ್ದರಾಮಯ್ಯ ಅವರು ಒಂದೇ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದ್ರು. ಈ ಮೂಲಕ ಬದಾಮಿಯಲ್ಲಿ‌ ಸಿದ್ದರಾಮಯ್ಯ ಅವರ ವಿರುದ್ದ ಸ್ಪರ್ಧಿಸಿದ್ದಾರೆ ಎಂಬ ಕುರುಬ ಸಮುದಾಯದ ಅಸಮಾಧಾನವನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು. ಬಳ್ಳಾರಿ ನಗರದಲ್ಲಿ ಕುರುಬ ಸಂಘದ ವಾಣಿಜ್ಯ ಮಳಿಗೆ ಹಾಗೂ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿದ ಸಚಿವರು, ನಾವು ರಾಜಕೀಯಗೋಸ್ಕರ ಮಾತನಾಡುತ್ತೇವೆ. ವೈಯಕ್ತಿಕವಾಗಿ ನನಗೂ ಸಿದ್ದರಾಮಯ್ಯ ಅವರಿಗೂ ಏನು ಇರೋದಿಲ್ಲ. ಜಾತಿ ವ್ಯವಸ್ಥೆಯಲ್ಲಿ ಇವೆಲ್ಲ ಮಾಡಬೇಕು. ಇವು ರಾಜಕಾರಣದ ತಂತ್ರಗಾರಿಕೆ, ಇದೆಲ್ಲ ಮಾಡಿಕೊಂಡು ಹೋದರೆ ಮಾತ್ರ ರಾಜಕಾರಣಕ್ಕೆ ಅರ್ಥ ಬರುತ್ತದೆ ಎಂದರು. ನೀವು ಶ್ರೀ ರಾಮುಲು ಅವರು ಕುರುಬ ಸಮಾಜ ಮತ್ತು ಸಿದ್ದರಾಮಯ್ಯ ವಿರುದ್ದ ಎಂದು ತಿಳಿದುಕೊಳ್ಳಬೇಡಿ. ಸಿದ್ದರಾಮಯ್ಯ ಮತ್ತು ನಾನು ಎರಡೆರಡು ಕ್ಷೇತ್ರದಲ್ಲಿ ನಿಂತು ಒಂದರಲ್ಲಿ ಗೆದ್ದು, ಮತ್ತೊಂದು ಕ್ಷೇತ್ರದಲ್ಲಿ ಸೋತಿದ್ದೇವೆ. ಸಿದ್ದರಾಮಯ್ಯ ಮತ್ತು ನಾನು ವಿರುದ್ಧ ಪಕ್ಷದಲ್ಲಿದ್ದೇವೆ. ಆದರೆ, ನಾವಿಬ್ಬರು ಬಹಳಷ್ಟು ದೋಸ್ತಿಗಳು ಎಂದು ಸಚಿವ ಬಿ. ಶ್ರೀರಾಮುಲು ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಸ್ಟಾರ್ ಗಳ ವಿರುದ್ಧ ಯತ್ನಾಳ್ ಕಿಡಿ