Select Your Language

Notifications

webdunia
webdunia
webdunia
webdunia

ಎಲೆಕ್ಟ್ರಿಕ್ ಬಸ್ ಗಳ ಖರೀದಿಯ ಬಗ್ಗೆ ಶ್ರೀರಾಮುಲು ಹೇಳಿದೇನು?

ಎಲೆಕ್ಟ್ರಿಕ್ ಬಸ್ ಗಳ ಖರೀದಿಯ ಬಗ್ಗೆ ಶ್ರೀರಾಮುಲು ಹೇಳಿದೇನು?
bangalore , ಶುಕ್ರವಾರ, 18 ಮಾರ್ಚ್ 2022 (17:58 IST)
ನಗರದಲ್ಲಿ ಸಂಚರಿಸುವ ಎಲೆಕ್ಟ್ರಿಕ್ ಬಸ್‍ಗಳ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಸದಸ್ಯರಾದ ಕೆ.ಗೋವಿಂದರಾಜು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗುತ್ತಿಗೆ ಆಧಾರದ ಮೇಲೆ ನಿಯೋಜಿಸಲಾಗಿರುವ ಎಲೆಕ್ಟ್ರಿಕ್ ಬಸ್‍ಗಳು 90 ಕಿ.ಮೀನಷ್ಟು ಸಂಚರಿಸುತ್ತಿವೆ. 24 ಬಸ್‍ಗಳು ಸದ್ಯಕ್ಕೆ ಕಾರ್ಯಾಚರಣೆ ನಡೆಸುತ್ತಿವೆ. ಅವುಗಳಲ್ಲಿ ಕೆಲವು 190 ಕಿ.ಮೀವರೆಗೂ ಸಂಚಾರ ಮಾಡಿವೆ ಎಂದು ವಿವರಿಸಿದರು.
 
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, 300 ಬಸ್‍ಗಳ ಕಾರ್ಯಾಚರಣೆಗೆ ಒಪ್ಪಂದ ಮಾಡಿಕೊಂಡು ಬಿಲ್ ಪಾವತಿಸಲಾಗುತ್ತಿದೆ. ಆದರೆ 24 ಬಸ್‍ಗಳು ಮಾತ್ರ ಸಂಚರಿಸುತ್ತಿವೆ. 190 ಕಿ.ಮೀ ಸಂಚರಿಸಬೇಕು ಎಂಬ ಕರಾರು ಇದೆ. ಕೇವಲ 90 ಕಿ.ಮೀ ನಷ್ಟು ಸಂಚರಿಸುತ್ತಿವೆ. ಇದರಲ್ಲಿ ಸಾಕಷ್ಟು ಅವ್ಯವಹಾರವಾಗಿದೆ ಎಂದು ಆರೋಪಿಸಿದರು.
 
ಈ ವೇಳೆ ಮಧ್ಯಪ್ರವೇಶ ಮಾಡಿದ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರು, ಸಾರಿಗೆ ನೌಕರರಿಗೆ ವೇತನ ಪಾವತಿಯಾಗುತ್ತಿಲ್ಲ. ಆದರೆ ಸರ್ಕಾರ ಅನಗತ್ಯವಾಗಿ ಈರೀತಿ ಹಣ ವೆಚ್ಚ ಮಾಡುತ್ತಿದೆ. ಹೆಚ್ಚುವರಿಯಾಗಿ 300 ಬಸ್‍ಗಳ ಖರೀದಿಗೂ ಮುಂದಾಗಿದೆ. ಇದು ಸರಿಯಲ್ಲ ಎಂದರು.
 
ಇದಕ್ಕೆ ಸ್ಪಷ್ಟನೆ ನೀಡಿದ ಸಚಿವರು , ಈ ಹಿಂದೆ 7-8ಗಳವರೆಗೂ ಸಾರಿಗೆ ನೌಕರರಿಗೆ ವೇತನ ಪಾವತಿಯಾಗುತ್ತಿರಲಿಲ್ಲ. ಈಗ ನಮ್ಮ ಸರ್ಕಾರ ಕೋವಿಡ್ ಸಂಕಷ್ಟದ ನಡುವೆಯೂ 3 ಸಾವಿರ ಕೋಟಿ ರೂ. ಆರ್ಥಿಕ ನೆರವಿನೊಂದಿಗೆ ವೇತನ ಪಾವತಿಸಿದೆ. ಎರಡು ತಿಂಗಳ ವೇತನ ಪಾವತಿ ಬಾಕಿ ಉಳಿದಿದೆ. ಅದನ್ನು ಕೂಡ ಪಾವತಿಸಲು ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಬಾಕಿ ಪಾವತಿಸಲಾಗುವುದು ಎಂದರು.
 
ಶಾಸಕ ಪ್ರಕಾಶ್ ರಾಥೋಡ್ ಪ್ರಶ್ನೆಗೆ ಉತ್ತರಿಸಿದ ಸಚಿವರು, 6ನೇ ವೇತನ ಆಯೋಗ ಜಾರಿ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಸಾರಿಗೆ ನಿಗಮಗಳ ನೌಕರರ ಪೈಕಿ 2846 ಮಂದಿಯನ್ನು ಅಮಾನತುಗೊಳಿಸಲಾಗಿದೆ, 1500 ಮಂದಿಯನ್ನು ವಜಾಗೊಳಿಸಲಾಗಿದೆ. ಅದರಲ್ಲಿ ಕೆಎಸ್‍ಆರ್‍ಟಿಸಿ 281 ಮಂದಿಯ ಅಮಾನತನ್ನು ಹಿಂಪಡೆಯಲಾಗಿದೆ. ವಜಾಗೊಂಡ 74 ಮಂದಿ ಪೈಕಿ 5 ಮಂದಿಯನ್ನು ಪುನರ್ ನೇಮಕ ಮಾಡಲಾಗಿದೆ.
 
ಬಿಎಂಟಿಸಿಯಲ್ಲಿ ಎಲ್ಲರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ. ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 61 ಮಂದಿಯ ಅಮಾನತನ್ನು ಹಿಂಪಡೆಯಲಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 63 ಮಂದಿಯನ್ನು ಅಮಾನತನ್ನು ಹಿಂಪಡೆಯಲಾಗಿದೆ.
 
ವಜಾಗೊಂಡ 60 ಮಂದಿ ಪೈಕಿ 7 ಮಂದಿಯನ್ನು ಮರು ನೇಮಕ ಮಾಡಿಕೊಳ್ಳಲಾಗಿದೆ. ವಜಾಗೊಂಡ ಎಲ್ಲ ನಿಗಮಗಳ ನೌಕರರು ಲೋಕ ಅದಾಲತ್ ಮೂಲಕವೇ ಮರು ನೇಮಕಗೊಳ್ಳಬೇಕೆಂದು ಸೂಚಿಸಲಾಗಿದೆ. ಆದರೆ ಸರ್ಕಾರ ಎಲ್ಲರನ್ನೂ ಮರು ನೇಮಕ ಮಾಡಿಕೊಳ್ಳುವ ಬದ್ದತೆ ಹೊಂದಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಟೆಕ್ನಿಕಲ್ ಪ್ಯಾನೆಲ್ ನಿಂದ ಕೊರೊನಾ ಎಚ್ಚರಿಕೆ