Publish Date: Fri, 18 Mar 2022 (17:55 IST)
Updated Date: Fri, 18 Mar 2022 (17:58 IST)
ಕೊರೊನಾ ಸಂಕಷ್ಟ ಬಹುತೇಕ ಮುಗಿದಿದು , ಸರ್ಕಾರ ಕೂಡ ಕೋವಿಡ್ ನಿಯಮಗಳನ್ನು ಸಡಿಲಗೊಳಿಸಿದೆ. ಜನರು ಕೂಡ ಮೊದಲಿನಂತೆ ತಮ್ಮ ಜೀವನ ಕಟ್ಟಿಕೊಳ್ಳುವ ಕಡೆಗೆ ಗಮನಹರಿಸಿದ್ದಾರೆ. ಇದೀಗ ಕರ್ನಾಟಕ ಟೆಕ್ನಿಕಲ್ ಪ್ಯಾನಲ್ ನಿಂದ ಎಚ್ಚರಿಕೆಯೊಂದು ರವಾನೆಯಾಗಿದೆ.ಈ ವರ್ಷದ ಅಂತ್ಯದವರೆಗೂ ಮಾಸ್ಕ್ ಧರಿಸುವಂತೆ ಎಲ್ಲಾರಿಗೂ ಎಚ್ಚರಿಕೆ ನೀಡಿದ್ದಾರೆ.ಕೊರೊನಾ ಕಡಿಮೆಯಾಗುತ್ತಿದೆ ಎಂದು ಜನರೂ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ .ಕೊರೊನಾ ಕಡಿಮೆಯಾದರೂ ಕೂಡ ಮಾಸ್ಕ್ ಧರಿಸಲೇಬೇಕೆಂದು ಎಚ್ಚರಿಕೆ ನೀಡಿದ್ದಾರೆ.