Select Your Language

Notifications

webdunia
webdunia
webdunia
webdunia

ಕಾವೇರಿ ನೀರನ್ನ ಕೊಳ್ಳೆ ಹೊಡೆದು ಕನ್ನಡಿಗರ ಹಿತಾಸಕ್ತಿಗೆ ಕೊಳ್ಳಿ ಇಡುತ್ತೀರಾ: ಡಿಸಿಎಂಗೆ ಆರ್‌ ಅಶೋಕ್‌ ಪ್ರಶ್ನೆ

Honey Trap, Opposition Leader R Ashok, DCM DK Shivkumar,

Sampriya

ಬೆಂಗಳೂರು , ಶನಿವಾರ, 22 ಮಾರ್ಚ್ 2025 (18:10 IST)
ಬೆಂಗಳೂರು: ರಾಜ್ಯದಲ್ಲಿ ಇಡೀ ಕಾಂಗ್ರೆಸ್‌ ಸರ್ಕಾರವೇ ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿರುವಾಗ ಪಾರ್ಟ್ ಟೈಂ ಡಿಸಿಎಂ ಡಿಕೆ ಶಿವಕುಮಾರ್‌ ಸಾಹೇಬರು ತಮಗೆ ಸಂಬಂಧವೇ ಇಲ್ಲದಂತೆ ಚೆನ್ನೈ ಪ್ರವಾಸ ಕೈಗೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಲೇವಾಡಿ ಮಾಡಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

ಸ್ವಾಮಿ ಡಿ.ಕೆ.ಶಿವಕುಮಾರ್ ಅವರೇ, ತಾವು ಚೆನ್ನೈ ಪ್ರವಾಸ ಕೈಗೊಂಡಿರುವುದು ಯಾವ ಪುರುಷಾರ್ಥಕ್ಕಾಗಿ?

ಮರೀನಾ ಬೀಚ್ ನಲ್ಲಿ ಪಾದಯಾತ್ರೆ ಮಾಡಿ ಮೇಕೆದಾಟು ಯೋಜನೆಗೆ NOC ನೀಡುವಂತೆ ತಮಿಳುನಾಡು ಸಿಎಂ ಸ್ಟಾಲಿನ್ ಅವರ ಮೇಲೆ ಒತ್ತಡ ಹೇರುತ್ತೀರಾ?

ಮೇಕೆದಾಟು ಯೋಜನೆಗೆ ಅವಕಾಶ ಕೊಡುವುದಿಲ್ಲ ಎಂದು ಖಡಾಖಂಡಿತವಾಗಿ ತಮ್ಮ ಪ್ರಣಾಳಿಕೆಯಲ್ಲಿ ಹೇಳಿರುವ ಡಿಎಂಕೆ ಪಕ್ಷದ ನಾಯಕರ ನಟ್ಟು-ಬೋಲ್ಟು ಟೈಟು ಮಾಡುತ್ತೀರಾ?

❓ಅಥವಾ ತಮಿಳುನಾಡು ಸಿಎಂ ಸ್ಟಾಲಿನ್ ಅವರನ್ನ ಕೆ.ಆರ್.ಎಸ್ ನಲ್ಲಿ ಕಾವೇರಿ ಆರತಿಗೆ ಆಹ್ವಾನಿಸಿ, ಕಾವೇರಿ ನೀರನ್ನ ಕೊಳ್ಳೆ ಹೊಡೆದು ಕನ್ನಡಿಗರ ಹಿತಾಸಕ್ತಿಗೆ ಕೊಳ್ಳಿ ಇಡುತ್ತೀರಾ?

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಒಂದೇ ಮಳೆಗೆ ತುಂಬಿ ಹರಿದ ಬೆಂಗಳೂರು ರಸ್ತೆಗಳು